Advertisement
ಸಂಘದ ಕಾರ್ಯಕರ್ತರು, ಜಲಯೋಧರು, ಪರಿಸರ ಪ್ರೇಮಿಗಳು, ಪಾದ ಯಾತ್ರೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತಾರೆ. ಯುವಕರು, ಮಕ್ಕಳಿಗೆ ಪ್ರೇರಣೆ ನೀಡತೊಡಗಿದ್ದಾರೆ. ರಾಜಸ್ಥಾನದಲ್ಲಿದ್ದಂತಹ ಸ್ಥಿತಿಯಲ್ಲೇ ಬರದ ದವಡೆಗೆ ಸಿಲುಕಿ ನಲುಗುತ್ತಿರುವ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಜಲಕ್ರಾಂತಿ ಜಾಗೃತಿ ಅಭಿಯಾನದ ಅವಶ್ಯಕತೆ ಇದೆ. ಜೀವಜಲದ ಮಹತ್ವದ ಜನರಿಗೆ ಮನನ ಮಾಡುವ, ಜಲ ಸಂರಕ್ಷಣೆ, ಸಂವರ್ಧನೆ ನಿಟ್ಟಿನಲ್ಲಿ ಜಲಯೋಧರನ್ನು ರೂಪಿಸುವ ಕಾರ್ಯ ಆಗಬೇಕಿದೆ.
Related Articles
Advertisement
ಅಕ್ಷಯ ತೃತೀಯ ಪಾದಯಾತ್ರೆ: ಅಕ್ಷಯ ತೃತೀಯದಂದು ನಡೆಸುವ ಪಾದಯಾತೆ ಗ್ರಾಮಗಳ ಸಬಲೀಕರಣ ಉದ್ದೇಶವನ್ನು ಹೊಂದಿದೆ. ಗ್ರಾಮೀಣ ಜನರಿಗೆ ಸ್ವತ್ಛತೆ, ಆರೋಗ್ಯ ಸುರಕ್ಷತೆ, ವಿವಿಧ ಸೌಲಭ್ಯಗಳ ಮಾಹಿತಿ, ಕೃಷಿಗೆ ಪೂರಕ ವೃತ್ತಿಗಳ ಮಹತ್ವ, ಪಶುಸಂಗೋಪನೆ ಕುರಿತು ಜನರಿಗೆ ಮಾಹಿತಿ ನೀಡುವ ಜತೆಗೆ, ಗ್ರಾಮಸಬಲೀಕರಣ ಮಹತ್ವವನ್ನು ತಿಳಿಸಿ ಕೊಡಲಾಗುತ್ತದೆ.
ಪರಿಹಾರ ಧಿಕ್ಕರಿಸಿ ಭೂಮಿ ಪಡೆದರು: ಅಲ್ವಾರ್ ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದ ಜನ ರನ್ನು ಅರಣ್ಯ ಇಲಾಖೆ ಸ್ಥಳಾಂತರಿಸಲು ನಿರ್ಧರಿ ಸಿತ್ತು. ಒಂದು ಕಟುಂಬಕ್ಕೆ 10ಲಕ್ಷ ರೂ.ವರೆಗೆ ಪರಿಹಾರ ನೀಡು ವುದಾಗಿ ಘೋಷಿಸಿತ್ತು. ಆದರೆ, ಹೆಚ್ಚಿನ ಸಂಖ್ಯೆ ಯವರು ಪರಿಹಾರದ ಹಣದ ಆಸೆಗೆ ಸಿಲುಕದೆ, ತಮಗೆ ಭೂಮಿ ಬೇಕೆಂದು ಪಟ್ಟು ಹಿಡಿದರು. ಕೊನೆಗೆ ಜನರ ಬೇಡಿಕೆಗೆ ಮಣಿದ ಸರ್ಕಾರ ಪ್ರತಿ ಕುಟುಂಬಕ್ಕೆ 4 ಎಕರೆ ಜಮೀನು ನೀಡಿದೆ. 20 ಗ್ರಾಮಗಳ ಜನರು ಭೂಮಿ ಪಡೆದಿದ್ದಾರೆ.
ಹನಿ ನೀರಿಗೂ ಸಂಕಷ್ಟವಿದ್ದ ಸ್ಥಿತಿಯಲ್ಲಿ 10 ಲಕ್ಷ ರೂ. ಪರಿಹಾರದ ಆಸೆಗೆ ಕೈ ಚಾಚದೆ, ಭವಿಷ್ಯದ ದೃಷ್ಟಿಯಿಂದ ಭೂಮಿಗಾಗಿ ಪಟ್ಟು ಹಿಡಿದೆವು. ಟಿಬಿಎಸ್ ಜಾಗೃತಿ, ಮಾರ್ಗದರ್ಶನದೊಂದಿಗೆ ಜಲಸಂವರ್ಧನೆಗೆ ಮುಂದಾಗಿ ಬಾಂದಾರ, ನೀರಿನ ಹೊಂಡಗಳ ನಿರ್ಮಿಸಿ ದೆವು. ಅರಣ್ಯ ನಾಶ ಮಾಡುತ್ತಾರೆಂದು ಅರಣ್ಯ ಇಲಾಖೆಯವರು ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಆದರೆ, ನಾವು ಪಡೆದ ಭೂಮಿಯಲ್ಲಿ ಕೃಷಿ ಮಾಡುತ್ತಲೇ ಸುತ್ತಮುತ್ತಲ ಪ್ರದೇಶದಲ್ಲಿ ಇಲಾಖೆಗಿಂತಲೂ ಹೆಚ್ಚಿನ ರೀತಿಯಲ್ಲಿ ಅರಣ್ಯ ಬೆಳೆಸಿದ್ದೇವೆ. 70-80 ಅಡಿಗೆ ನೀರು ಸಿಗುತ್ತಿದೆ. ನನ್ನ ಹೊಲದಲ್ಲಿ ಎರಡುವರೆ ಇಂಚು ನೀರು ಬಂದಿದೆ ಎನ್ನುತ್ತಾರೆ ದೇವರಿಗೋಡಾದ ಗಿರಿರಾಜ ಪ್ರಸಾದ್.
ಪ್ರೇರಕ ಶಕ್ತಿ ಭೀಕಂಪುರ ಆಶ್ರಮ: ಜಲ ಸಂವರ್ಧನೆ ಜಾಗೃತಿ ಸಾಧನೆಯ ಹಿಂದೆ ಪ್ರೇರಕ ಶಕ್ತಿಯಾಗಿರುವುದು ಭಿಕಂಪುರದಲ್ಲಿ ಇರುವ ತರುಣ ಭಾರತ ಸಂಘದ ಆಶ್ರಮ. ಇದೊಂದು ಜಲ-ಪರಿಸರ ವಿವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವರ್ಷದ 12 ತಿಂಗಳು ಆಶ್ರಮದಲ್ಲಿ ಜಲ-ಪರಿಸರ ಕುರಿತಾಗಿ ತರಬೇತಿ, ಜಾಗೃತಿ ಚಿಂತನ-ಮಂಥನ, ಗೋಷ್ಠಿಗಳು ನಡೆಯುತ್ತಲೇ ಇರುತ್ತವೆ. ವರ್ಷದಲ್ಲಿ ಮೂರು ಬಾರಿ ಕೈಗೊಳ್ಳುತ್ತಿರುವ ಪಾದಯಾತ್ರೆಯಿಂದ ಜಲ, ಪರಿಸರ, ಗ್ರಾಮ ಸಬಲೀಕರಣ ನಿಟ್ಟಿನಲ್ಲಿ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಜೀವಜಲ ಉಳಿವಿಕೆಗೆ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಜಲ ಸಂರಕ್ಷಣೆಯ ಸೇವೆಯಲ್ಲಿ ತೊಡಗಿದ ಛೋಟಾಲಾಲ್, ಗೋಪಾಲ
ನಮ್ಮಲ್ಲಿ ನದಿ, ಹಳ್ಳ, ಬಾಂದಾರ, ಹೊಂಡಗಳಿಂದ ಕೃಷಿಗೆ ನೇರವಾಗಿ ನೀರು ಪಡೆಯುವುದಿಲ್ಲ. ಬದಲಾಗಿ ತೆರೆದ ಬಾವಿ ಇಲ್ಲವೆ ಕೊಳವೆ ಬಾವಿಯಿಂದಲೇ ನೀರು ಪಡೆಯುತ್ತೇವೆ. ಗೋಧಿ, ಸಾಸಿವೆ, ಕಡಲೆ ಇನ್ನಿತರ ಬೆಳೆ ಬೆುುಳೆ¿ತ್ತಿದ್ದು, ಪಶುಪಾಲನೆಯೊಂದಿಗೆ ಹಾಲು ಮಾರಾಟ ಮಾಡುತ್ತೇವೆ. ಕೋವಾ ಮಾಡಿಯೂ ಮಾರಾಟ ಮಾಡುತ್ತೇವೆ.-ಗಿರಿರಾಜ ಪ್ರಸಾದ, ದೇವರಿಗೋಡಾ, ರಾಜಸ್ಥಾನ * ಅಮರೇಗೌಡ ಗೋನವಾರ