Advertisement

ಪತಿ ಸಾವಿಗೆ ನೊಂದು ಪತ್ನಿ ಆತ್ಮಹತ್ಯೆ ಯತ್ನ

12:50 PM Nov 13, 2017 | Team Udayavani |

ಬೆಂಗಳೂರು: ಪತಿ ಸಾವಿನ ಬಳಿಕ ಮಾನಸಿಕ ಖನ್ನತೆಗೆ ಒಳಗಾಗಿದ್ದ ಬಾಷ್‌ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಕಟ್ಟಡದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಡಿವಾಳದ ಚಿಕ್ಕ ಆಡುಗೋಡಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ಚಿಕ್ಕಆಡುಗೋಡಿ ನಿವಾಸಿ ಲೀನೆಟ್‌ ಆಂಡ್ರೋಸ್‌ (33) ಆತ್ಮಹತ್ಯೆಗೆ ಯತ್ನಿಸಿದವರು. ಸೇಂಟ್‌ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳ ಮೂಲದ ಲೀನೆಟ್‌ ಬಾಷ್‌ ಕಂಪೆನಿಯ ಉದ್ಯೋಗಿಯಾಗಿದ್ದು, ಎರಡು ವರ್ಷಗಳ ಹಿಂದೆ ಮನೋವೈದ್ಯ ರೋನಿ ಎಂಬುವರನ್ನು ಮದುವೆಯಾಗಿದ್ದು, ಆಡುಗೋಡಿಯಲ್ಲಿ ನೆಲೆಸಿದ್ದರು.

ಈ ಮಧ್ಯೆ ಮೂರು ತಿಂಗಳ ಹಿಂದೆ ಪತಿ ರೋನಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಲೀನೆಟ್‌ ಮಾನಸಿಕ ಖನ್ನತೆಗೊಳಗಾಗಿದ್ದರು. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಬಳಿಕ ಸಹೋದರಿಯ ಒತ್ತಾಯದ ಮೇರೆಗೆ ಚಿಕ್ಕಆಡುಗೋಡಿಯಲ್ಲಿ ಪಿ.ಜಿ.ಯಲ್ಲಿ ನೆಲೆಸಿದ್ದರು. 

ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ವಸತಿ ಗೃಹದ ಮೂರನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿದ್ದ ರಭಸಕ್ಕೆ ತಲೆ ಮತ್ತು ಕೈ, ಕಾಲುಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಡಿವಾಳ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next