ಸಂಕೇಶ್ವರ : ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಬೃಹತ್ ಆಕಾರದ ಮರವೊಂದು ಹೊಟೇಲ್ ಮೇಲೆ ಉರುಳಿ ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿರುವ ಘಟನೆ ಸಂಕೇಶ್ವರ ನಗರದಲ್ಲಿ ನಡೆದಿದೆ. ಮಾಲಿಕ ಓಡಿ ಬಂದು ಬಚಾವಾಗಿದ್ದಾನೆ.
Advertisement
ಸೋಮವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಸಂಕೇಶ್ವರ ಪಟ್ಟಣದ ಸರಕಾರಿ ಆಸ್ಪತ್ರೆಯ ಬಳಿ ಇದ್ದ ಸಣ್ಣ ಹೊಟೇಲ್ ಮೇಲೆ ಬೃಹತ್ತಾದ ಮರವೊಂದು ಬುಡಸಮೇತವಾಗಿ ಉರುಳಿಬಿದ್ದಿದೆ. ಈ ವೇಳೆ ಹೊಟೇಲ್ ನಲ್ಲಿ ಇದ್ದ ಬಡಪಾಯಿ ಮಾಲಿಕ ಹೊರ ಓಡಿ ಬಂದು ಜೀವ ಉಳಿಸಿಕೊಂಡಿದ್ದಾನೆ.
ಈ ಘಟನೆಯಲ್ಲಿ ಹೊಟೇಲ್ ನಲ್ಲಿ ಇದ್ದ ಫ್ರೀಜ್, ಟೇಬಲ್, ಕುರ್ಚಿ, ಅಡುಗೆ ಸಾಮಗ್ರಿಗಳು ಸೇರಿದಂತೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.