Advertisement

ಅಂತರ್ಜಲಕ್ಕೆ ಕೈ ಹಾಕಿದರೆ ಭಾರೀ ಅಪಾಯ

10:56 PM Jul 31, 2019 | Team Udayavani |

ಉಡುಪಿ: ಕೆರೆ, ಬಾವಿಗಳನ್ನು ಬಿಟ್ಟು ಕೊಳವೆಬಾವಿಗಳನ್ನೇ ಕೊರೆಯುತ್ತಾ ಅಂತರ್ಜಲಕ್ಕೆ ಕೈಹಾಕಿದರೆ ಮುಂದೆ ಭಾರೀ ಅಪಾಯ ಕಾದಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌ ಅಭಿಪ್ರಾಯಪಟ್ಟರು.

Advertisement

ಜು. 31ರಂದು ಉಡುಪಿ ನಗರಸಭೆ ವತಿಯಿಂದ ಬಿಲ್ಡರ್ ಅಸೋಸಿಯೇಶನ್‌ ಮತ್ತು ಎಂಜಿನಿಯರ್ ಅಸೋಸಿ ಯೇಶ‌ನ್‌ ಸಹಯೋಗದಲ್ಲಿ ಪುರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಳೆ ನೀರು ಕೊಯ್ಲು ಕುರಿತಾದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.

ಕೆರೆ, ತೆರೆದ ಬಾವಿ ಮೊದಲಾದ ನೀರಿನ ಮೂಲಗಳಿಂದ ನೀರನ್ನು ಬಳಸಿದರೆ ಪರಿಸರಕ್ಕೆ ಯಾವುದೇ ತೊಂದರೆಯಾಗದು. ಆದರೆ ಕೊಳವೆ ಬಾವಿಗಳಿಂದ ಅಪಾಯ ಖಚಿತ. ಬೆಂಗಳೂರಿನಲ್ಲಿ ವರ್ಷಕ್ಕೆ ಸುಮಾರು 800 ಮಿ.ಮೀ.ನಷ್ಟು ಮಳೆಯಾಗುತ್ತದೆ. ಆದರೆ ಕರಾವಳಿ ಪ್ರದೇಶದಲ್ಲಿ ವಾರ್ಷಿಕ 4,000 ಮಿ.ಮೀ.ನಷ್ಟು ಮಳೆಯಾಗುತ್ತದೆ. ಆದರೂ ಇಲ್ಲಿ ನೀರಿನ ಕೊರತೆ ಉಂಟಾಗಿರುವುದು ದುರಂತ. ನೀರು ಇಂಗಿಸುವ ಕಡೆಗೆ ಗಮನ ಕೊಡದಿರುವುದರಿಂದ ಸಮಸ್ಯೆ ಗಂಭೀರವಾಗುತ್ತಿದೆ ಎಂದು ಲಕ್ಷ್ಮೀಕಾಂತ್‌ ಹೇಳಿದರು.

ಎಲ್ಲದಕ್ಕೂ ನೀರು
ನಾವು ಉಸಿರಾಡುವ ಗಾಳಿಯ ಮೂಲವೂ ನೀರು. ನೀರು ಭೂಮಿಯ ಮೇಲಿನ ಅದ್ಬುತ ವಸ್ತು. ಮಂಗಳ ಗ್ರಹದಲ್ಲಿಯೂ ನೀರನ್ನೇ ಹುಡುಕ ಲಾಗುತ್ತಿದೆ. ಪೋಷಕಾಂಶಗಳಿಂದ ಕೂಡಿದ ಮಣ್ಣಿನ ಸಾರವನ್ನು ಮರ ಗಿಡ ಗಳು ಹೀರಿಕೊಳ್ಳಬೇಕಾದರೂ ನೀರು ಬೇಕು. ಹಿಂದಿನ ಕಾಲದಲ್ಲಿ ರಾಜರ ಅಭಿವೃದ್ಧಿ ಕಾರ್ಯಗಳಲ್ಲಿ ಕೆರೆಗಳನ್ನು ನಿರ್ಮಿಸುವುದು ಪ್ರಮುಖವಾಗಿತ್ತು. ಆದರೆ ಇಂದು ಕೆರೆಗಳು ಸಮತಟ್ಟಾಗಿವೆ. ಬೆಂಗಳೂರಿನಲ್ಲಿದ್ದ 360 ಕೆರೆಗಳ ಪೈಕಿ ಈಗ 60 ಮಾತ್ರ ಉಳಿದಿವೆ ಎಂದು ಅವರು ಹೇಳಿದರು.

ಸಾಧಕ ಬಾಧಕ ಚರ್ಚೆ
ಉಡುಪಿ ಜಿಲ್ಲಾಡಳಿತವು ಮಳೆ ನೀರು ಕೊಯ್ಲು ಘಟಕವನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಘಟಕದಿಂದ ಆಗಬಹುದಾದ ಸಾಧಕ ಬಾಧಕಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆಯ ಪರಿಸರ ಎಂಜಿನಿಯರ್‌ ರಾಘವೇಂದ್ರ ಬಿ.ಎಸ್‌. ಹೇಳಿದರು.

Advertisement

ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್‌ ಸ್ವಾಗತಿಸಿದರು. ಎಂಜಿನಿ ಯರ್ ಅಸೋಸಿಯೇಷನ್‌ ಅಧ್ಯಕ್ಷ ಗೋಪಾಲ ಕೃಷ್ಣ ಭಟ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್‌ ಕೆ. ಉಪಸ್ಥಿತರಿದ್ದರು.

ನೇರವಾಗಿ ಬಳಕೆ
ಮನೆ, ಇತರ ಕಟ್ಟಡಗಳಿಗೆ ಅಳವಡಿ ಸುವ ಮಳೆನೀರು ಕೊಯ್ಲು ಘಟಕದಿಂದ ನೀರನ್ನು ನೇರವಾಗಿ ಮನೆಯ ನೀರು ಸಂಗ್ರಹ ತೊಟ್ಟಿಗೆ(ಸಂಪ್‌) ಬಿಡಬಹುದು. ಮೊದಲ ಮಳೆಯ ನೀರನ್ನು ಮಾತ್ರ ಹೊರಗೆ ಬಿಟ್ಟು ಅನಂತರದ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಸಾಮಾನ್ಯವಾಗಿ ನಾವು ನದಿಗಳಿಗೆ ಸೇರುವ ಮಳೆ ನೀರನ್ನು ಬಳಕೆ ಮಾಡುತ್ತೇವೆ. ಹಾಗಾಗಿ ಮಳೆ ನೀರನ್ನು ನೇರವಾಗಿ ಬಳಸಿದರೂ ಅಪಾಯವಾಗದು ಎಂದು ಲಕ್ಷ್ಮೀಕಾಂತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next