ನವದೆಹಲಿ: ದೇಶದಲ್ಲಿಯೇ ಐಫೋನ್ ತಯಾರಿಸುವ ದೊಡ್ಡ ಘಟಕ ಹೊಸೂರು ಬಳಿ ಸ್ಥಾಪನೆಯಾಗಲಿದೆ. ಅದರಿಂದಾಗಿ 60 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರು ಸಮೀಪದ ಹೊಸೂರು ಬಳಿ ಶುರುವಾಗುವ ಆ್ಯಪಲ್ ಕಂಪನಿಯ ಘಟಕದಲ್ಲಿ ಹಜಾರಿಬಾಗ್ ಮತ್ತು ರಾಂಚಿಯ ಬುಡಕಟ್ಟು ಸಮುದಾಯದ 6 ಸಾವಿರ ಮಂದಿ ಇರಲಿದ್ದಾರೆ. ಅದಕ್ಕಾಗಿ ಅವರಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ ಎಂದು ಸಚಿವ ವೈಷ್ಣವ್ ತಿಳಿಸಿದ್ದಾರೆ.
ಐಫೋನ್ ಉತ್ಪಾದನೆ ಮಾಡುವ ಹೊಣೆಯನ್ನು ಆ್ಯಪಲ್ ಕಂಪನಿ ಟಾಟಾ ಇಲೆಕ್ಟ್ರಾನಿಕ್ಸ್‌ಗೆ ಹೊರಗುತ್ತಿಗೆ ನೀಡಿದೆ. ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಟ್ರಾನ್‌ಗಳ ಮೂಲಕವೂ ದೇಶದಲ್ಲಿ ಐಫೋನ್‌ಗಳನ್ನು ಉತ್ಪಾದಿಸಲಾಗುತ್ತದೆ.