ಶ್ರೀರಂಗಪಟ್ಟಣ: ತಾಲ್ಲೂಕಿನ ಹೊರವಲಯದಲ್ಲಿರುವ ಚಂದ್ರವನ ಆಶ್ರಮದ ಬಳಿ ಇರುವ ಬಂಗಾರದೊಡ್ಡಿ ನಾಲೆಯಲ್ಲಿ ಬೃಹತ್ ಮೊಸಳೆಯನ್ನು ಸೆರೆ ಹಿಡಿಯಲಾಗಿದೆ.
Advertisement
ಭಾರೀಗಾತ್ರದ ಮೊಸಳೆಯೊಂದು ಶನಿವಾರ ಬೆಳಿಗ್ಗೆ ಕಾಣಿಸಿಕೊಂಡ ಬಳಿಕ ಅಕ್ಕ ಪಕ್ಕದ ರೈತರು ಆತಂಕಗೊಂಡು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ನಾಲೆಯ ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಭಾರೀ ಗಾತ್ರದ ಮೊಸಳೆಯನ್ನು ಸುರಕ್ಷಿತವಾಗಿ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು ವಾಹನದ ಮೂಲಕ ಪಕ್ಕದಲ್ಲೆ ಇರುವ ಪಕ್ಷಿಧಾಮಕ್ಕೆ ಕೊಂಡೊಯ್ದ ನದಿಗೆ ಬಿಡುಗಡೆ ಮಾಡಿದ್ದಾರೆ.