Advertisement

ಮಳೆಗೆ ಕುಸಿದ ಮನೆ, ಪ್ರಜ್ಞೆ ತಪ್ಪಿದ ಮಹಿಳೆ: ತಡವಾಗಿ ಬಂದ ಆಂಬ್ಯುಲೆನ್ಸ್

10:54 AM Nov 13, 2021 | Team Udayavani |

ಗುಡಿಬಂಡೆ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪೊಲಂಪಲ್ಲಿ ಗ್ರಾಮದಲ್ಲಿನ ಹಳೇ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

Advertisement

ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಚಂಡ ಮಾರುತದಿಂದ ಎಡೆಬಿಡದೆ ಸುರಿಯುತ್ತಿರುವ ಜಟಿ ಜಟಿ ಮಳೆಯಿಂದ ತಾಲೂಕಿನ ಪೋಲಂಪಲ್ಲಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ವೃದ್ಧೆ ವೆಂಕಟನರಸಮ್ಮ (52) ಅವರ ಮೇಲೆ ಮಣ್ಣಿನ ಗೋಡೆ ಬಿದ್ದಿದ್ದರಿಂದ ಪ್ರಜ್ಞೆ ತಪ್ಪಿದ್ದು, ಸ್ಥಳೀಯರು ರಕ್ಷಿಸಿ ಹೊರಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಆನೆಯ ಪಾದ ಸೇರಿ ಸುಮಾರು 1 ಕೋಟಿ ರೂ. ಮೌಲ್ಯದ ಪ್ರಾಚೀನ ವಸ್ತುಗಳ ಮಾರಾಟಕ್ಕೆ ಯತ್ನ

ತಡವಾಗಿ ಬಂದ ಆಂಬ್ಯುಲೆನ್ಸ್

ಪ್ರಜ್ಞೆ ತಪ್ಪಿದ ಮಹಿಳೆಯನ್ನು ಆಸ್ಪತ್ರೆಗೆ ಕೆರದೊಯ್ಯಲು ಕರೆ ಮಾಡಿದಾಗ ಆಂಬ್ಯುಲೆನ್ಸ್ ತಡವಾಗಿ ಬಂದಿದೆ .ಸ್ಥಳೀಯರು ಆಕ್ರೋಶಗೊಂಡು ಕಾರಿನಲ್ಲಿ ಕರೆದೊಯ್ಯಲು ಮುಂದಾದಾಗ ಆಂಬ್ಯುಲೆನ್ಸ್ ಬಂದಿದೆ. ಬಳಿಕ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next