Advertisement

ಸುಗಮ ಸಂಗೀತದ ಮೇರು ಗಾಯಕ, ಖ್ಯಾತ ಗಮಕಿ ಚಂದ್ರಶೇಖರ ಕೆದ್ಲಾಯ ವಿಧಿವಶ

01:55 PM Jan 24, 2023 | Team Udayavani |

ಉಡುಪಿ: ಸುಗಮ ಸಂಗೀತದ ಮೇರು ಗಾಯಕ, ಖ್ಯಾತ ಗಮಕ ಕಲಾವಿದ, ನಿವೃತ್ತ ಅಧ್ಯಾಪಕ ಚಂದ್ರಶೇಖರ ಕೆದ್ಲಾಯ(73ವರ್ಷ) ಅವರು ಮಂಗಳವಾರ (ಜನವರಿ 24) ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ರಾಜ್ಯದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರ ಕೊರತೆ ಇದೆ: ನಳಿನ್ ಕುಮಾರ್ ಕಟೀಲ್

ಎಚ್.ಚಂದ್ರಶೇಖರ ಕೆದ್ಲಾಯ ಅವರು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಸುಮಾರು ಮೂರು ದಶಕಕ್ಕೂ ಅಧಿಕ ಕಾಲ ಕನ್ನಡ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಇಂದು ಬೆಳಗ್ಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೆದ್ಲಾಯ ಅವರು ಕೊನೆಯುಸಿರೆಳೆದಿರುವುದಾಗಿ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿ, ಬಂಧು-ಬಳಗವನ್ನು ಅಗಲಿದ್ದಾರೆ.

ಹಿರಿಯ ಆಕಾಶವಾಣಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ ಕೆದ್ಲಾಯ ಅವರು 1950 ಏಪ್ರಿಲ್ 23ರಂದು ಉಡುಪಿ ಜಿಲ್ಲೆಯ  ಹೆಸ್ಕತ್ತೂರು ಗ್ರಾಮದ ಹಾರಾಡಿಯಲ್ಲಿ ಜನಿಸಿದ್ದರು.

Advertisement

ಕೆದ್ಲಾಯ ಅವರು ಕೆನರಾ ಪ್ರೌಢ ಶಾಲೆ ಮತ್ತು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಖ್ಯಾತ ಗಮಕಿ ಕಲಾವಿದರಾಗಿದ್ದ ಕೆದ್ಲಾಯರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next