ಬೆಂಗಳೂರು: ಚಾರುವಸಂತ ಮಹಾಕಾವ್ಯ ಭಾರತೀಯ ಸಾಹಿತ್ಯದ ದೊಡ್ಡ ಆಸ್ತಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಹಂಪಿ ನಗರದ ಅನಕೃ ಕನ್ನಡ ಸಂಘ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಏರ್ಪಡಿಸಿದ್ದ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅವರ ಚಾರುವಸಂತ ಉರ್ದು ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾರುವಸಂತ ಕಾವ್ಯ ಕನ್ನಡಿಗರೆಲ್ಲಾರೂ ಓದಲೇ ಬೇಕಾದ ದೇಸಿ ಮಹಾಕಾವ್ಯ ಎಂದು ಬಣ್ಣಿಸಿದರು.
ಕಾವ್ಯವನ್ನು ಓದಿದರೆ ಚಾರುದತ್ತ ಎಂಬ ಜೈನ ವ್ಯಾಪಾರಿ ಹಾಗೂ ವಸಂತ ತಿಲಕೆ ಎನ್ನುವ ಸುಂದರಿಯ ನಡುವಿನ ರಮ್ಯ ಭಾವಗಳು ಕವಿ ಮುಖದ ಶೃಂಗಾರ ರೂಪವನ್ನು ತೋರಿಸಿಕೊಡುತ್ತವೆ. ಪತ್ನಿ, ತಾಯಿ ಸೇರಿದಂತೆ ಸ್ತ್ರೀಲೋಕದ ಹಲವು ಮುಖಗಳನ್ನು ಕಾವ್ಯ ಅನಾವರಗೊಳಿಸುತಾ, ಓದುಗರನ್ನು ಹಿಡಿದಿಡುತ್ತದೆ ಎಂದರು.
ಕೋಲ್ಕತ್ತಾ ಮೂಲದ ಹೆಸರಾಂತ ಸಾಹಿತಿ ಸೈಯದ್ ಹಸ್ಮತ್ ಜಲಾಲ್ ಮಾತನಾಡಿ, ಚಾರುವಸಂತ ಕಾವ್ಯದ ಮೂಲಕ ಸಮಾಜದ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರೊ.ಹಂಪ ನಾಗರಾಜಯ್ಯ ಅವರು ಯಶಸ್ವಿಯಾಗಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನದ ನಂತರ ಹಂಪನಾ ಅವರ ಚಾರುವಸಂತ ಅತ್ಯದ್ಭುತ ಕಾವ್ಯವಾಗಿ ಹೊರಹೊಮ್ಮಿದೆ ಎಂದು ಶ್ಲಾ ಸಿದರು.
ಪ್ರೊ. ಹಂಪ ನಾಗರಾಜಯ್ಯ, ಕಮಲಾ ಹಂಪನ, ಉರ್ದು ಲೇಖಕ ಡಾ.ಮಾಹೇರ್ ಮನ್ಸೂರ್,ಕರ್ನಾಟಕ ಅಂಚೆಯ ಇಲಾಖೆ ಹಿರಿಯ ಅಧಿಕಾರಿ ಡಾ.ಚಾಲ್ಸìಲೋಬೋ ,ಅ.ನ.ಕೃ ಕನ್ನಡ ಸಂಘದ ಅಧ್ಯಕ್ಷ ರು.ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.