ಬೆಂಗಳೂರು: ದೇಶದಾದ್ಯಂತ ನದಿಗಳ ಪುನರುಜ್ಜೀವನಕ್ಕಾಗಿ ಇಶಾ ಫೌಂಡೇಷನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಜಾಗೃತಿ ರ್ಯಾಲಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ರ್ಯಾಲಿಯಲ್ಲಿ ನೂರಾರು ಯುವಕರು, ಪರಿಸರವಾದಿಗಳು ಭಾಗವಹಿಸಿ ನದಿಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು.
ನದಿಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರವ್ಯಾಪ್ತಿ ಕಾರ್ಯಕ್ರಮವನ್ನು ಇಶಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅದರಂತೆ ನಗರದ ನಗರದ ಪ್ರಮುಖ ಭಾಗಗಳಲ್ಲಿ ನದಿ – ಕೆರೆ ಉಳಿಸಿ ಆಂದೋಲನವನ್ನು ಕೈಗೊಳ್ಳಲಾಗಿತ್ತು.
ಆಂದೋಲನದಲ್ಲಿ ಭಾಗವಹಿಸಿದ್ದವರು ನದಿಗಳನ್ನು ಯಾಕೆ ಉಳಿಸಬೇಕು, ನದಿಗಳ ಪ್ರಾಮುಖ್ಯತೆಯೇನು ಎಂಬ ಮಾಹಿತಿಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿಸಿದರು. ಜತೆಗೆ ಜಾಗೃತಿ ಆಂದೋಲನದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ನಗರದ ಎಂ.ಜಿ.ರಸ್ತೆ, ಸಿಎಂ.ಎಚ್ ರಸ್ತೆ ಜಂಕ್ಷನ್, ಲಾಲ್‌ಬಾಗ್ ಪಶ್ಚಿಮ ದ್ವಾರ, ಗಾಂಧಿ ಬಾರ್, ಡೈರಿ ಸರ್ಕಲ್, ಹೋಫ್ಫಾರಂ ಜಂಕ್ಷನ್, ಮೇಖೀÅ ವೃತ್ತ, ಒರಾಯನ್ ಮಾಲ್, ಮಾನ್ಯತಾ ಟೆಕ್‌ಪಾರ್ಕ್, ಸೋನಿ ವರ್ಲ್ಡ್ ಸಿಗ್ನಲ್, ಸಿಲ್ಕ್ಬೋರ್ಡ್ ಜಂಕ್ಷನ್, ವಿಧಾನಸೌಧ ಮುಂಭಾಗ, ಇಸ್ಕಾನ್ ದೇವಾಲಯ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ನದಿಗಳ ಕುರಿತು ಜಾಗೃತಿ ಮೂಡಿಸಲು ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಸೆ.3 ರಿಂದ ಅ.2ರವರೆಗೆ ಕನ್ಯಾಕುಮಾರಿಯಿಂದ ಹರಿದ್ವಾರದವರೆಗೆ ದೇಶದ ಒಟ್ಟು 16 ರಾಜ್ಯಗಳಲ್ಲಿ ಸಂಚರಿಸಿ ಜಾಗೃತು ಮೂಡಿಸಲಿದ್ದಾರೆ. ಅದರಂತೆ ಸೆ.8 ರಂದು ಅವರು ಮೈಸೂರಿಗೆ ಆಗಮಿಸಲಿದ್ದು, ಅಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ರಾಜ್ಯದ ವಿವಿಧ ಮಠಗಳ ಮಠಾಧೀಶರು, ಧರ್ಮದರ್ಶಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರಿಗೆ ಸೆ.9ರಂದು ಅವರು ಆಗಮಿಸಲಿದ್ದು, ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿನಿ ತಾರೆಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದದಾರೆ. ಸಾರ್ವಜನಿಕರು ಸಹ
80009 80009ಕ್ಕೆ ಮಿಸ್ಡ್ಕಾಲ್ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಬಹುದಾಗಿದೆ.