Advertisement

ನನ್ನಂಥಾ ಒಳ್ಳೇ ಹುಡುಗಿ ಎಲ್ಲಪ್ಪಾ ಸಿಕ್ತಾಳೆ?

06:00 AM Sep 25, 2018 | |

ನೂರು ಕನಸಿನ ಹುಡುಗ, 
ಅಷ್ಟುದ್ದಕ್ಕೂ ನೆನಪಿನ ರಂಗವಲ್ಲಿ ಹಾಕಿ ನಿನಗಾಗಿ ಕಾದು ಕುಳಿತಿದ್ದೇನೆ. ಉದ್ದುದ್ದದ ಕನಸಿನ ಬಣ್ಣ ತುಂಬಿದ್ದೇನೆ. ನೀನಲ್ಲಿ ಒಲವಿನ ಗೆರೆಗಳನ್ನು ಬಿತ್ತಬೇಕು ಅಷ್ಟೇ.

Advertisement

ಹೂವು ಗೀವು ಕೊಟ್ಟು ಫಾರ್ಮಾಲಿಟಿಗಾಗಿ ಪ್ರಪೋಸ್‌ ಮಾಡೋದೇನೂ ಬೇಡ. ಆದ್ರೆ ವಾರಕ್ಕೊಮ್ಮೆ ಇಷ್ಟವಾಗಿರೋ ಡ್ರೆಸ್‌ ಕೊಡಿಸು, ಜೊತೆಗೆ ಮ್ಯಾಚಿಂಗ್‌ ಜ್ಯುವೆಲ್ಸ… ಒಂದಷ್ಟು ಬೇಕು. ವಾರಕ್ಕೊಮ್ಮೆ ಅಲ್ಲದಿದ್ದರೂ, ತಿಂಗಳಿಗೊಮ್ಮೆ ಪಿಕ್‌ನಿಕ್‌ ಕರ್ಕೊಂಡು ಹೋಗು. ನಮ್ಮ ಬದುಕಿಗೆ ದೊಡ್ಡ ಬಂಗಲೆ ಕಟ್ಟೋಣ. ಹ್ಹಹ್ಹಾ…  ಏನಿದು ನೈಸ್‌ ಆಗಿ ಮಾತಾಡ್ತಾನೇ ದೊಡ್ಡ ದೊಡ್ಡ ಬೇಡಿಕೆಗಳನ್ನು ಮುಂದಿಡುತ್ತಿದ್ದಾಳೆ ಅಂದುಕೊಂಡೆಯಾ? ಸುಮ್ನೆ ತಮಾಷೆಗೆ ಹೇಳೆ ಕಣೋ. 

ನಿನಗೆ ಹೇಗೆ ಹೇಳಲಿ ಅನ್ನೋದೇ ಗೊತ್ತಾಗ್ತಿಲ್ಲ. ನೀನು ನನ್ನ ಬದುಕಿಗೆ ಬಲಗಾಲಿಟ್ಟು ಬಂದಾಗಿನಿಂದಲೂ ಎಲ್ಲವೂ ಬದಲಾಗಿದೆ. ನೀನು ನನಗಾಗಿಯೇ ಹುಟ್ಟಿದ ಚೆಲುವ ಎನಿಸಿದೆ. ನಿನ್ನ ಗುಲಾಬಿಯಂಥ ಸ್ನೇಹ, ಮಲ್ಲಿಗೆಯಂಥ ನಗು, ಇಕೊÕàರಾ ಹೂಗೊಂಚಲಿನಂಥ ಗಾಢವಾದ ಕಾಳಜಿ ನನಗೆ ಹುಚ್ಚು ಹಿಡಿಸದೆ ಇರುತ್ತಾ ಹೇಳು?

ನನಗೆ ನಾಟಕೀಯವಾಗಿ ಹೇಳ್ಳೋಕೆ ಬರಲ್ಲ. ಆದ್ರೂ ಸಿಂಪಲ್‌ ಆಗಿ ಹೇಳ್ತೀನಿ ಕೇಳು; ನಮ್ಮದೇ ಹೊಸ ಬದುಕು ಶುರುವಾಗ್ತದಲ್ಲ; ಆಗ, ಬೆಳಗ್ಗೆ ಬೇಗ ಎದ್ದು ಒಬ್ಬರಿಗೊಬ್ಬರು ಗುಡ್‌ ಮಾರ್ನಿಂಗ್‌ ಹೇಳ್ಕೊಳ್ಳೋಣ. ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳೋಣ. ಪೀಕಲಾಟಕ್ಕೆ ಸಿಕ್ಕಿ ಒದ್ದಾಡುವಾಗ, ತಪ್ಪಿದ್ದರೂ ಒಪ್ಪಿಕೊಳ್ಳದೆ ಪರಸ್ಪರರ ಮೇಲೆ ಎತ್ತಾಕಿ, ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ಲೈಟಾಗಿ ಜಗಳ ಆಡೋಣ. ನಂತರ ನೀನೇ ಸಾರಿ ಕೇಳಿಬಿಡು. ಎರಡೇ ನಿಮಿಷದಲ್ಲಿ ರಾಜಿಯಾಗಿ ನಗುವಿನೊಂದಿಗೆ ಜಗಳ ಸಮಾಪ್ತಿಗೊಳಿಸೋಣ. ಹಾಳಾದ ಮೊಬೈಲ್‌ ಬಳಸದೆ, ಅಗತ್ಯಕ್ಕಿಂತ ಹೆಚ್ಚು ತಂತ್ರಜ್ಞಾನ ಬಳಸದೆ ಸ್ವತ್ಛಂದವಾಗಿರೋಣ. ಆರಂಕಿ ಆದಾಯದ ಕೆಲಸ ಅಪೇಕ್ಷಿಸದೆ, ಮೂರಕ್ಷರದ ನೆಮ್ಮದಿ, ಸಂತೃಪ್ತಿ ಹೊಂದೋಣ. ಮುಸ್ಸಂಜೆಯ ಹೊತ್ತಲ್ಲಿ ಬಾನಾಡಿಗಳ ಹಾಗೆ ಹಾರಾಡುತ್ತಾ ನಮ್ಮ ಗೂಡುಗಳಿಗೆ ಮರಳ್ಳೋಣ. ಲೈಫ್ ಟೈಂ ಎಮರ್ಜೆನ್ಸಿಗೆ ಅಂತ ಸ್ವಲ್ಪ ಕೂಡಿಡೋಣ. ಒಬ್ಬರಿಗೊಬ್ಬರು ಬೇಸರವಾದವರಂತೆ, ಐಷಾರಾಮಿ ಹೋಟೆನಲ್ಲಿ ಅಪರಿಚಿತರಂತೆ ಊಟ ಮಾಡೋದೆಲ್ಲ ಬೇಡ. ಸಹಜವಾಗಿ ಜೀವಿಸೋಣ. ನಂಬಿಕೆಯ ಕಟ್ಟಿಗೆ ಇಟ್ಟು, ಪ್ರೀತಿಯ-ತಾಳ್ಮೆಯ ಅಗ್ಗಿಷ್ಟಿಕೆ ಹೊತ್ತಿಸಿ ಅಪ್ಪ-ಅಮ್ಮನಂಥ ಒಲವನ್ನು ನಮ್ಮಿಬ್ಬರ ಎದೆಯಲ್ಲಿ   ಎಂದೆಂದಿಗೂ ಬೆಚ್ಚಗಿರಿಸೋಣ. ಇಷ್ಟು ಸಾದಾ ಸೀದಾ ಸಿಂಪಲ್‌ ಹುಡುಗಿ ನಿನಗೆ ಯಾರು ಸಿಕ್ತಾರೆ ಹೇಳು? ನಾನಂತೂ ಹೇಳಿದ್ದೇನೆ. ನಾನು ಹೇಳಿದ್ದಕ್ಕೆಲ್ಲ ಓಕೆ ಅನ್ನಬೇಕಿರೋದು ನೀನು! ವೇಯಿxಂಗ್‌ ಫಾರ್‌ ಯುವರ್‌ ಸ್ಪೀಡ್‌ ರಿಪ್ಲೆ„.. 
ಇಂತಿ ನಿನ್ನ 
ಪಲ್ಲವಿ  

Advertisement

Udayavani is now on Telegram. Click here to join our channel and stay updated with the latest news.

Next