ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಚಂದ್ರಶೇಖರ ಪಾಟೀಲ(83) ಅವರು ವಯೋಸಹಜ ಅನಾರೋಗ್ಯದ ಕಾರಣ ದಿಂದಾಗಿ ಜ.10ರಂದು ನಿಧನ ಹೊಂದಿದ್ದರು.
Advertisement
1939ರ ಜೂ.18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದ್ದ ಇವರಿಗೆ ಬಾಲ್ಯದಲ್ಲಿಯೇ ಸಾಹಿತ್ಯದತ್ತ ಆಸಕ್ತಿ ಮೂಡಿತ್ತು. ಧಾರವಾಡದಲ್ಲಿ ಶಿಕ್ಷಣ ಪೂರೈಸಿದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಇವರ ಪ್ರಥಮ ಕವನಸಂಕಲನ “ಬಾನುಲಿ’ ಬಿಡುಗಡೆಯಾಗಿತ್ತು. ಕರ್ನಾಟಕ ವಿ.ವಿ.ಯಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಶಿಕ್ಷಣ ಪಡೆದ ಚಂಪಾ ಅವರು ಅಲ್ಲಿಯೇ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ಇದೇ ವೇಳೆ ತಮ್ಮ ಸ್ನೇಹಿತರ ಜತೆಗೂಡಿ ಸಂಕ್ರಮಣ ಎಂಬ ಹೆಸರಿನ ದ್ವೆ„ಮಾಸಿಕ ಪತ್ರಿಕೆಯನ್ನು ಆರಂಭಿಸಿದ್ದರು. ಇಂಗ್ಲೆಂಡ್‌ನ ಲೀಡ್ಸ್ ವಿ.ವಿ.ಯಿಂದ ಎಂ.ಎ. ಪದವಿ ಪೂರೈಸಿದ ಇವರು ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದರು. ಗೋಕಾಕ ಚಳವಳಿಯಲ್ಲೂ ಇವರು ಪ್ರಧಾನ ಪಾತ್ರ ವಹಿಸಿದ್ದರು.
ಕನ್ನಡದ ಚೆಂಬೆಳಕಿನ ಕವಿ ಎಂದೇ ಖ್ಯಾತರಾಗಿದ್ದ , ಸಮನ್ವಯ ಲೇಖಕ ಹಾಗೂ ಹಿರಿಯ ಸಾಹಿತಿ ಚೆನ್ನವೀರ ಕಣವಿ(94) ಫೆ. 16ರಂದು ನಿಧನ ಹೊಂದಿದ್ದರು.
Related Articles
Advertisement
1928ರ ಜೂ. 28ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಜನಿಸಿದ್ದ ಇವರು ಧಾರವಾಡದಲ್ಲಿ ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣ ಪೂರೈಸಿದ್ದರು. ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವಿ ಪಡೆದ ಅವರು ಇದೇ ವಿ.ವಿ.ಯ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. ಆ ಬಳಿಕ 1956ರಿಂದ 83ರ ವರೆಗೆ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.ಆ ಕಾಲದಲ್ಲಿ ಸಾಹಿತ್ಯದ ನೆಲೆಯಾಗಿದ್ದ ಧಾರವಾಡದ ಸಾಹಿತ್ಯಿಕ ವಾತಾವರಣ ಸಹಜವಾಗಿಯೇ ಅದರತ್ತ ಕಣವಿ ಅವರನ್ನು ಸೆಳೆಯಿತು. ಕುವೆಂಪು, ಬೇಂದ್ರೆ, ಮಧುರಚೆನ್ನಯರ ಸಾಹಿತ್ಯದಿಂದ ಪ್ರೇರಿತರಾದ ಇವರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.
ಕವನ ಸಂಕಲನ, ಪ್ರಬಂಧ ಸಂಕಲನ, ಶಿಶು ಸಾಹಿತ್ಯ ಮಾತ್ರವಲ್ಲದೆ ಅನೇಕ ಸಂಪಾದನ ಕೃತಿಗಳನ್ನು ಕಣವಿ ಅವರು ರಚಿಸಿದ್ದರು. 1982ರಲ್ಲಿ ಇವರ ಜೀವಧ್ವನಿ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. 1989 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2002ರಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, 2004ರಲ್ಲಿ ಕರ್ನಾಟಕ ವಿ.ವಿ. ಯ ಗೌರವ ಡಾಕ್ಟರೆಟ್ ಪದವಿ, ನೃಪತುಂಗ ಪ್ರಶಸ್ತಿ, ದುಬಾ„ ಕನ್ನಡರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ…ಹೀಗೆ ಹತ್ತು ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಚೆನ್ನವೀರ ಕಣವಿ ಅವರಿಗೆ ಲಭಿಸಿದ್ದವು.
ಹಿರಿಯ ನಟ, ಕಲಾತಪಸ್ವಿ ರಾಜೇಶ್ ನಿಧನಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ಎಂದೇ ಪ್ರಸಿದ್ಧಿಯಾಗಿದ್ದ ಹಿರಿಯ ನಟ ರಾಜೇಶ್(89) ಫೆ.19 ರಂದು ನಿಧನ ಹೊಂದಿದರು. ಉಸಿ ರಾಟದ ತೊಂದರೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿತ್ತು. 1960 ರಲ್ಲಿ ವೀರ ಸಂಕಲ್ಪ ಚಿತ್ರದೊಂದಿಗೆ ಸಿನೆಮಾ ರಂಗಕ್ಕೆಪಾದಾರ್ಪಣೆ ಮಾಡಿದ್ದ ಇವರು ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರ ಮೂಲ ಹೆಸರು ಮುನಿ ಚೌಡಪ್ಪ. ಅವರು ಚಿತ್ರರಂಗದಲ್ಲಿ ರಾಜೇಶ್ ಆಗಿ ಗುರುತಿಸಿಕೊಂಡರು. ರಂಗಭೂಮಿ ಹಾಗೂ ಆರಂಭದ ದಿನಗಳ ಚಿತ್ರಗಳಲ್ಲಿ ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಶಕ್ತಿ ನಾಟಕ ಮಂಡಳಿಯನ್ನು ಕಟ್ಟಿದ್ದರು. ವಿಷಸರ್ಪ, ನಂದಾದೀಪ, ಕಿತ್ತೂರು ರಾಣಿ ಚೆನ್ನಮ್ಮ ರಾಜೇಶ್ ಅಭಿನಯದ ಕೆಲವು ನಾಟಕಗಳು. ಕಪ್ಪುಬಿಳುಪು, ದೇವರಗುಡಿ, ಕಾವೇರಿ, ಚದುರಿದ ಚಿತ್ರಗಳು, ವಸಂತನಿಲಯ, ಸೊಸೆ ತಂದ ಸೌಭಾಗ್ಯ, ಕ್ರಾಂತಿವೀರ, ಊರ್ವಶಿ ಇವರು ಅಭಿನಯಿಸಿದ ಪ್ರಮುಖ ಚಿತ್ರಗಳು. ಸುಪ್ರೀಂ ಮೆಟ್ಟಿಲೇರಿದ ಹಿಜಾಬ್ ಪ್ರಕರಣ
ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿ
ರಾಜಕೀಯ ಸ್ವರೂಪ ಪಡೆದಿದ್ದ ಹಿಜಾಬ್ ಪ್ರಕರಣಕ್ಕೆ ಮಾ.15ರಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ಪ್ರಕರಣಕ್ಕೆ ತರೆ ಎಳೆದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಯಿತಾದರೂ ಹೈಕೋರ್ಟ್ ತೀರ್ಪಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತಲ್ಲದೆ ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿತು. “ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ; ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮಿನ ನಂಬಿಕೆ ಅನ್ವಯ ಅಗತ್ಯ ಧಾರ್ಮಿಕ ಆಚರಣೆ ಯೆಂದು ರೂಪಿತವಾಗುವುದಿಲ್ಲ’ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿತ್ತು. ಫೆ.6ರಂದು ರಾಜ್ಯ ಸರಕಾರ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸರಕಾರ ನಿಗದಿ ಪಡಿಸಿದ ಸಮವಸ್ತ್ರವನ್ನು ಧರಿಸ ಬೇಕೆಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೋರಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿ ನಿಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ತೀರ್ಪು ನೀಡಿದ ಹೈಕೋರ್ಟ್ “ಶಾಲಾ ಸಮವಸ್ತ್ರ ನಿಗದಿಪಡಿಸುವುದು ಸಂವಿಧಾನದಲ್ಲಿ ಅನುಮತಿಸಲಾದ ವಿವೇಕಯುಕ್ತ ಮತ್ತು ಸಮಂಜಸ ನಿರ್ಧಾರವಾಗಿದ್ದು, ಅದನ್ನು ವಿದ್ಯಾರ್ಥಿಗಳು ಪ್ರಶ್ನಿಸುವಂತಿಲ್ಲ. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆಗೆ ಸಂಬಂಧಿಸಿ ಸರಕಾರ ಫೆ.5 ರಂದು ಹೊರಡಿಸಿದ್ದ ಆದೇಶ ಕಾನೂನು ಬದ್ಧ ವಾಗಿದೆ’ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜುಲೈಯಲ್ಲಿ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿತ್ತು. ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಹೈಕೋರ್ಟ್ ಆದೇಶವನ್ನು ಯಥಾಸ್ಥಿತಿ ಯಲ್ಲಿರಿಸಿದ್ದೇ ಅಲ್ಲದೆ ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.