Advertisement

ಜರ್ಮನಿ ಮೂಲದ ಯುವತಿಗೆ ನಟ ಆರ್ಯ ವಂಚನೆ ?    

08:30 PM Jul 29, 2021 | Team Udayavani |

ಚೆನ್ನೈ : ತಮಿಳು ನಟ ಆರ್ಯ ವಿರುದ್ಧ ವಂಚನೆಯ ಆರೋಪವೊಂದು ಕೇಳಿ ಬಂದಿದೆ. ಮದುವೆಯಾಗಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಜರ್ಮನ್ ಮೂಲದ ಯುವತಿಯೋರ್ವಳು ಆರ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

Advertisement

ಜರ್ಮನಿ ಮೂಲದ ವಿದ್ಜಾ ಹೆಸರಿನ ಯುವತಿ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆರ್ಯ 70 ಲಕ್ಷ ರೂಪಾಯಿ ತೆಗೆದುಕೊಂಡು ಮದುವೆಯಾಗುವುದಾಗಿ ನಂಬಿಸಿದ್ದರಂತೆ. ಆರ್ಯ ಹಾಗೂ ತಮ್ಮ ನಡುವೆ ನಡೆದ ಚಾಟ್​ನ ಸ್ಕ್ರೀನ್​ ಶಾಟ್​ಗಳನ್ನು ವಿದ್ಜಾ ಪೊಲೀಸರ ಜತೆ ಹಂಚಿಕೊಂಡಿದ್ದಾರೆ.

ಜರ್ಮನಿ ಮೂಲದ ವಕೀಲರ ಸಹಾಯದಿಂದ ಯುವತಿ ದೂರು ದಾಖಲು ಮಾಡಿದ್ದಾರೆ. ಇದು ಕೋರ್ಟ್​ ಮೆಟ್ಟಿಲು ಕೂಡ ಏರಿದ್ದು, ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಇತ್ತೀಚಿಗಷ್ಟೆ ಆರ್ಯ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ತಾವು ಪ್ರೀತಿಸಿ ಮದುವೆಯಾಗಿರುವ ಸೆಯ್ಯಸಾ ಸೆಹಗಲ್ ಜೊತೆ ಮೊದಲ ಮಗು ಪಡೆದಿದ್ದಾರೆ. ಇಂತಹ ಖುಷಿ ಸಂದರ್ಭದಲ್ಲಿಯೇ ಅವರ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next