ನೋಯ್ಡಾ: ಕಾಲೇಜು ಆವರಣದಲ್ಲೇ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯನ್ನೇ ಅಪ್ಪಿ, ಆಕೆಗೇ ಗುಂಡಿಟ್ಟು ಹತ್ಯೆಗೈದು, ಬಳಿಕ ತಾನೂ ಗುಂಡುಹಾರಿಸಿಕೊಂಡು ಮೃತ ಪಟ್ಟಿ ರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ನೋಯ್ಡಾದ ಶಿವನಾಡರ್ ವಿ.ವಿ. ಆವರಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಯಾಗಿದ್ದ ಅನುಜ್ ಎಂಬಾತ ತನ್ನದೇ ತರಗತಿಯ ವಿದ್ಯಾ ರ್ಥಿನಿ ಜತೆಗೆ ಆಪ್ತವಾಗಿದ್ದ. ಯಾವುದೋ ವಿಚಾರಕ್ಕಾಗಿ ಮನಸ್ತಾಪವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕೆಯನ್ನು ಅಪ್ಪಿಕೊಂಡ ಯುವಕ ತತ್‌ಕ್ಷಣವೇ ಗುಂಡಿಟ್ಟು ಹತ್ಯೆಗೈದಿದ್ದಾನೆ. ಬಳಿಕ ಹಾಸ್ಟೆಲ್‌ಗೆ ತೆರಳಿ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಕೇಸು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
Crime: ಸ್ನೇಹಿತೆಯನ್ನು ಅಪ್ಪಿ, ಗುಂಡಿಟ್ಟು ಕೊಂದ!
11:58 PM May 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.