ರವಿವಾರ ಶೀರಡ್ಕ ಭಾಗದಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಏಳುವುದು ಮಡಪ್ಪಾಡಿಗೆ ಕಂಡು ಬಂದಿದೆ. ಅಲ್ಲದೆ ಬೆಂಕಿ ಉರಿಯುವ ಭಾರೀ ಶಬ್ದವೂ ಸ್ಥಳೀಯರಿಗೆ ಕೇಳಿ ಬರುತ್ತಿದೆ.
Advertisement
ಕೆಲವು ದಿನಗಳಿಂದ ಕಾಡ್ಗಿಚ್ಚು ಕಂಡು ಬಂದಿದ್ದು ಕಾರ್ಯಾಚರಣೆ ನಡೆಸಲಾಗುತಿದೆ. ರವಿವಾರ ಕೂಡ ಶೀರಡ್ಕ ಭಾಗದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು ಅರಣ್ಯ ಇಲಾಖೆ ನಂದಿಸುವ ಕಾರ್ಯ ನಡೆಸಲಾಗುತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.