ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟೋಪಿ ಐದು ನಿಮಿಷಗಳಿಗೆ ಚೇಂಜ್ ಆಗುತ್ತದೆ. ಬ್ಲ್ಯಾಕ್ ಮೇಲ್ , ಕಂಡೀಷನ್‌ಗಳು ಇಲ್ಲಿ ನಡೆಯುವುದಿಲ್ಲ ಎಂದು ಹೇಳುವ ಮೂಲಕ ತಮಗೆ ಕೆಪಿಸಿಸಿ ಅಧ್ಯಕ್ಷಗಿರಿ ತಪ್ಪಿಸಲು ಯತ್ನಿಸುತ್ತಿರುವವರಿಗೆ ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾರಾದರೂ ಬ್ಲ್ಯಾಕ್‌ವೆುàಲ್ ಮಾಡುತ್ತಾರೆ ಅಂದರೆ ಆಗುವುದಿಲ್ಲ. ಅಂಥ ಮೂರ್ಖರು ಸಿಗುವುದಿಲ್ಲ. ನಾನು ಹೇಳಿದಂತೇ ನಡೆಯಬೇಕು ಅಂದರೆ ಆಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ನನ್ನದೂ ನಡೆಯಲಿಲ್ಲ, ಯಾರದೂ ನಡೆಯುವುದಿಲ್ಲ. ಶಿಸ್ತಿನ ಸಿಪಾಯಿ ಆಗಿದ್ದರೆ ಮಾತ್ರ ಗೌರವ ಸಿಗುತ್ತದೆ. ಕಂಡೀಷನ್ ಏನೂ ನಡೆಯಲಾರದು. ನಾನು ಹೈಕಮಾಂಡ್‌ಗೆ ಯಾವುದೇ ಕಂಡೀಷನ್ ಹಾಕಿಲ್ಲ ಎಂದರು.
ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕೆಪಿಸಿಸಿ ಎಲ್ಲೂ ಕುಸಿದು ಬಿದ್ದಿಲ್ಲ. ನಾಡಿದ್ದು ಕಾರ್ಯಕ್ರಮ ಇದೆ. ಎಲ್ಲರೂ ಪಕ್ಷದ ಧ್ವಜ ಹಿಡಿದು ಹೋಗುತ್ತೇವೆ. ದಿನೇಶ್ ಗುಂಡೂರಾವ್ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಕಚೇರಿಯತ್ತ ತಲೆ ಹಾಕಿಲ್ಲ ಎಂಬ ಬಗ್ಗೆ ಕೇಳಿದಾಗ, ಅದನ್ನು ಅವರ ಬಳಿಯೇ ಕೇಳಿ ಎಂದುತ್ತರಿಸಿದರು.
ಖಂಡನೆ
ಮಂಗಳೂರು ಗೋಲಿಬಾರ್‌ನಲ್ಲಿ ಮೃತರಾದವರಿಗೆ ಸರಕಾರ ಪರಿಹಾರ ಘೋಷಿಸಿ ವಾಪಸ್ ಪಡೆದಿರುವುದು ಬಿಜೆಪಿಯ ನೀತಿಗೆ ಸಾಕ್ಷಿ. ಅವರು ಆರೋಪಿನೋ, ಯಾರೋ ಎನ್ನುವುದು ತನಿಖೆಯಾಗಬೇಕು. ಕೋರ್ಟ್ ಅದರ ಬಗ್ಗೆ ತೀರ್ಪು ನೀಡಬೇಕು. ಆದರೆ ಅದಕ್ಕೆ ಮುನ್ನವೇ ಆರೋಪಿ ಎಂದು ಗುರುತಿಸಿ ಕೊಟ್ಟಿದ್ದ ಚೆಕ್‌ಗೆ ತಡೆ ನೀಡಿದ್ದಾರೆ. ದಿಲ್ಲಿಯಿಂದ ಯಡಿಯೂರಪ್ಪ ಆವರಿಗೆ ಫೋನ್ ಬಂದಿದೆ, ಹೀಗಾಗಿ ಚೆಕ್ ತಡೆಹಿಡಿದಿದ್ದಾರೆ ಎಂದು ಹೇಳಿದರು.