Advertisement

Airport: ವಿಮಾನ ನಿಲ್ದಾಣದಲ್ಲೇ ಹೊಡೆದಾಟ

12:21 AM May 25, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಶಿಕಾಗೊ ನಗರದ ಓ ಹಾರೆ ವಿಮಾನ ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ಒಬ್ಬರ ಮೇಲೊಬ್ಬರು ಬಿದ್ದು, ವಿಚಿತ್ರ ರೀತಿಯಲ್ಲಿ ಹೊಡೆದಾಡಿ­ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. 12ಕ್ಕೂ ಅಧಿಕ ಮಂದಿ ಹೊಡೆದಾಟ ನಡೆಸಿರುವ ವೀಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಮಾನ ನಿಲ್ದಾಣದ 3ನೇ ಟರ್ಮಿನಲ್‌ನಲ್ಲಿ ಬ್ಯಾಗ್‌ ಕೌಂಟರ್‌ ಬಳಿ ಇದ್ದಕ್ಕಿದ್ದಂತೆ ಹೊಡೆದಾಟ ಶುರುವಾಗಿದೆ. ನೋಡ ನೋಡುತ್ತಿದ್ದಂತೆಯೇ 12ಕ್ಕೂ ಅಧಿಕ ಮಂದಿ ಒಬ್ಬರ ನ್ನೊಬ್ಬರು ಥಳಿಸಿಕೊಂಡಿದ್ದಾರೆ. ಮಹಿಳೆಯರು ನೆಲದ ಮೇಲೆ ಜುಟ್ಟು ಹಿಡಿದು ಹೊಡೆದಾಡುತ್ತಿರುವ ದೃಶ್ಯಗಳೂ ಇವೆ. ಈ ನಡುವೆ ಮಹಿಳೆಯೊಬ್ಬರಿಗೆ ಕ್ರಿಸ್ಟೋಫ‌ರ್‌ ಹಾಗೂ ಟೆ ಮ್ರಾ ಎಂಬ ಇಬ್ಬರು ಯುವಕರು ಥಳಿಸುತ್ತಿರುವುದು ಕಂಡುಬಂದಿದ್ದು ಆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next