Advertisement

ಕಾಡಿನಲ್ಲಿ 110ಕಿ.ಮೀ ದೂರ ಸಾಗಿದ ಹೆಣ್ಣು ಹುಲಿ!

07:55 AM Dec 26, 2017 | Team Udayavani |

ನಾಗ್ಪುರ: ಜಿಪಿಎಸ್‌ ಡಿವೈಸ್‌ ಅಳವಡಿಸಲಾಗಿದ್ದ ಹೆಣ್ಣು ಹುಲಿಯೊಂದು 110 ಕಿಲೋ ಮೀಟರ್‌ ದೂರ ಕಾಡಿನಲ್ಲಿ ಒಮ್ಮೆಲೇ ಪ್ರಯಾಣ ಬೆಳೆಸಿದ್ದು, ಇಷ್ಟು ದೂರ ಪ್ರಯಾಣ ಬೆಳೆಸಿರುವುದು ಇದೇ ಮೊದಲ ಬಾರಿಗೆ ಡಿವೈಸ್‌ನಲ್ಲಿ ದಾಖಲಾಗಿದೆ. ಈ ಹೆಣ್ಣು ಹುಲಿ ಮಹಾರಾಷ್ಟ್ರದ ಕೊಲ್ಸಾ ವಲಯದ ತಡೋಬಾ- ಅಂಧಾರಿ ಹುಲಿ ಸಂರಕ್ಷಿತಾರಣ್ಯದಿಂದ  ಪವೋನಿಯ ಉಮ್ರೆಡ್‌-ಕರ್ಹಾಂಡ್ಲಾ-ಪವೋನಿ ಅಭ್ಯಯಾ ರಣ್ಯ ಸೇರಿಕೊಂಡಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೆಹರಾಡೂನ್‌ನಲ್ಲಿರುವ ಭಾರತೀಯ ವನ್ಯಜೀವಿ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ, ವನ್ಯಜೀವಿ ತಜ್ಞ v ಾ. ಬಿಲಾಲ್‌ ಹಬೀಬ್‌, “ಜಿಪಿಎಸ್‌ ಡಿವೈಸ್‌ ಹೊಂದಿರುವ ರೇಡಿಯೋ ಕಾಲರ್‌ ಅಳವಡಿಸಲಾದ ಹುಲಿಯೊಂದು ಏಕಕಾಲದಲ್ಲಿ ಇಷ್ಟು ದೂರ ಸಾಗಿರುವುದನ್ನು ದಾಖಲಿಸಿದ್ದು ಇದೇ ಮೊದಲು. ಈ ಹಿಂದೆ ಸಾಗಿರುವ ಬಗ್ಗೆ ಮಾಹಿತಿ ಇದೆಯಾದರೂ, ಜಿಪಿಎಸ್‌ನಲ್ಲಿ ದಾಖಲಾಗಿರಲಿಲ್ಲ ಎಂದಿದ್ದಾರೆ. 2015ರಲ್ಲಿ ಗಂಡು ಹುಲಿಯೊಂದು ಬೋರ್‌ ಹುಲಿ ಸಂರಕ್ಷಿತಾರಣ್ಯದಿಂದ ಅಮರಾವತಿಯ ಪೊಹ್ರಾ ಮಾಲ್ಕೆಡ್‌ ಅರಣ್ಯಕ್ಕೆ, ಅಂದರೆ ಸುಮಾರು 150ಕಿ.ಮೀ. ಸಾಗಿತ್ತು. ಆದರೆ ಜಿಪಿಎಸ್‌ ಅಳವಡಿಸಲಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next