ಶಿರಸಿ: ಹೆಣ್ಣು ಚಿರತೆಯೊಂದು ಕರ್ಜಗಿಯ ತೋಟವೊಂದರಲ್ಲಿ ಅಸಹಜವಾಗಿ ಮೃತಪಟ್ಟ ಘಟನೆ ನಡೆದಿದೆ.
Advertisement
ಐದಾರು ವರ್ಷದ ಪ್ರಾಯದ ಚಿರತೆ ಇದಾಗಿದ್ದು, ನೀರು ಕುಡಿಯಲು ಊರ ಸಮೀಪದ ತೋಟಕ್ಕೆ ಬಂದಿರಬೇಕು ಎಂದು ಊಹಿಸಲಾಗಿದೆ. ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.
ಪಶು ವೈದ್ಯರು ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಂಗದ ಅನುಮತಿ ಪಡೆದು ಅಂತ್ಯಕ್ರಿಯೆ ನಡೆಸಲಾಯಿತು. ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಡಿಎಪ್ ಓ ಅಜ್ಜಯ್ಯ, ಎಸಿಎಫ್ ರಘು, ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ್ ಇತರರು ಇದ್ದರು.