ರಬಕವಿ-ಬನಹಟ್ಟಿ: ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಚಿಹ್ನೆಯೊಂದಿಗೆ 200 ಯೂನಿಟ್ ಗ್ಯಾರಂಟಿ ಉಚಿತ ಯೋಜನೆಯಡಿ ನಕಲಿ ಬಿಲ್ ಅನ್ನು ವ್ಯಾಟ್ಸಾಪ್, ಫೇಸ್‌ಬುಕ್ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ವೈರಲ್ ಮಾಡಿ ಹರಿಬಿಟ್ಟ ಕಾರಣ ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
ಗೃಹ ಜ್ಯೋತಿ ವಿದ್ಯುತ್ ಸರಬರಾಜು ನಿಗಮ ನಿಯಮಿತವೆಂದು ಬರೆದು ನಿಮ್ಮ ವಿದ್ಯುತ್ ಬಿಲ್ ಇನ್ನು ನಮ್ಮ ಜವಾಬ್ದಾರಿ ಎಂದೂ ಬರೆಯಲಾಗಿದೆ. ಇದು ನಕಲಿ ಹಾಗು ಕುತಂತ್ರಿಗಳ ಕೈವಾಡವಾಗಿದ್ದರೂ ಸರ್ಕಾರವಾಗುವ ಮುಂಚೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ನಲ್ಲಿರುವ ಕಾರಣ ಸಾಮಾನ್ಯ ಜನತೆಯು ಈ ಚಿತ್ರವನ್ನು ನಂಬುವಂತೆ ಮಾಡಿರುವದಂತು ಸತ್ಯ.