Advertisement

ಭಾರಿ ಮಳೆಗೆ ತುಂಬಿ ಹರಿದ ಹಳ್ಳ -ಕೊಳ್ಳ

05:40 PM Jul 31, 2022 | Shwetha M |

ಆಲಮೇಲ: ಆಲಮೇಲ ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ ಧಾರಾಕಾರ ಮಳೆಯಾಗಿದ್ದು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಗುರುವಾರ ಸಂಜೆ ಒಂದು ಗಂಟೆ ಭಾರಿ ಮಳೆಯಾಗಿದ್ದರೆ ಮತ್ತೆ ಶುಕ್ರವಾರ ಮಧ್ಯರಾತ್ರಿ ಅಪಾರ ಪ್ರಮಾಣದ ಮಳೆಯಾಗಿದೆ.

Advertisement

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಆಲಮೇಲ ತಾಲೂಕಿನ ದೇವಣಗಾಂವ ಪಂಚಾಯಿತಿ ವ್ಯಾಪ್ತಿಯಲ್ಲಿ 71 ಮೀ.ಮೀ, ದೇವರನಾವದಗಿ 50 ಮಿ.ಮೀ, ಬಮ್ಮನಹಳ್ಳಿ 26.5 ಮಿ.ಮೀ, ಮಲಘಾಣ 48.5 ಮಿ.ಮೀ, ಮೋರಟಗಿ 49.5 ಮಿ.ಮೀ, ಹಿಕ್ಕನಗುತ್ತಿ, 37.5 ಮಿ.ಮೀ, ಕಡಣಿ 37.5 ಮಿ.ಮೀ, ರಾಮನಹಳ್ಳಿ 50.5 ಮಿ.ಮೀ, ಕೊರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 2.5 ಮಿ.ಮೀಟರ್‌ ಮಳೆಯಾಗಿದೆ. ಆಲಮೇಲ ಭಾಗದಲ್ಲಿ ಮುಂಗಾರು ಮಳೆ ತಡವಾಗಿ ಆರಂಭವಾಗಿದ್ದು ಕಳೆದ ಒಂದು ವಾರ ಹಿಂದೆ ಜಿಟಿ ಜಿಟಿ ಮಳೆಯಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಿತ್ತು. ಗುರುವಾರ ಮತ್ತು ಶುಕ್ರವಾರ ಅಧಿಕ ಪ್ರಮಾಣದಲ್ಲಿ ಮಳೆಯಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಎರಡು ದಿನ ಸುರಿದ ಮಳೆಗೆ ರೈತರು ಸಂತಸಗೊಂಡಿದ್ದಾರೆ. ಆದರೆ ಬೇಸಿಗೆಯಲ್ಲಿ ಕೊಳವೆ ಬಾವಿಯಲ್ಲಿನ ನೀರು ಬತ್ತಿ ಹೋಗಿದ್ದು ಅದಕ್ಕೆ ನೀರು ಬರಬೇಕು ಎಂದರೆ ಹಳ್ಳ ಕೊಳ್ಳಗಳು ಹರಿಯುವಂತೆ ಹೆಚ್ಚಿನ ಮಳೆ ಅವಶ್ಯಕತೆ ಇದೆ. ಕಳೆದ ಒಂದು ವಾರದಿಂದ ಆರಂಭವಾದ ಜಿಟಿ ಜಿಟಿ ಮಳೆಯಿಂದ ಹತ್ತಿ, ಕಬ್ಬು, ಕಲ್ಲಂಗಡಿ, ಪಪ್ಪಾಯಿ, ಲಿಂಬೆ, ದಾಳಿಂಬೆ ಸೇರಿದಂತೆ ಅನೇಕ ಬೆಳೆಗಳಿಗೆ ಜೀವಕಳೆ ಬಂದಿದೆ. ಈ ಮಳೆಯ ಹದ ಚೆನ್ನಾಗಿ ಆದರೆ ಹೆಸರು, ಉದ್ದು, ತೊಗರಿ, ಹತ್ತಿ, ಕಬ್ಬು ನಾಟಿ ಮಾಡುವ ರೈತರಿಗೆ ಆಸರೆಯಾಗಲಿದೆ. ಜಿಡಿ ಮಳೆ ಕಡಿಮೆಯಾಗಿ ಬಿಸಿಲು, ಗಾಳಿ ಬಿದ್ದರೆ ಬೀಜ ಬಿತ್ತಲು ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು. ಮಳೆ ಮತ್ತು ತಂಪಾದ ಗಾಳಿ ಹೊಡೆತಕ್ಕೆ ಜನರಿಗೆ ಮಳೆಗಾಲದ ಕಾಯಿಲೆಗಳು ಬರುವ ಆತಂಕ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next