Advertisement
ಗುರುವಾರ ಜಿಲ್ಲಾಡಳಿತ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಬಿವಿವ ಸಂಘದ ಎಂ.ಬಿ.ಎ ಕಾಲೇಜ, ಮುಧೋಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿಕ ಸಮಾಜದ ಸಹಯೋಗದಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೆಲ್ಲದ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಆಯಾ ಜಿಲ್ಲೆಯ ಪ್ರಮುಖ ಬೆಳೆಯನ್ನು ಆಯ್ಕೆ ಮಾಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Related Articles
Advertisement
ಜಿಲ್ಲಾ ಜಂಟಿ ಕೃಷಿ ನಿದೇಶಕಿ ಡಾ|ಚೇತನಾ ಪಾಟೀಲ ಮಾತನಾಡಿ, ರೈತರು ಸಹ ಉದ್ಯಮಿಗಳಾಗಿ ಹೊರಹೊಮ್ಮಬೇಕು. ಶೇಖರಣೆ, ಸಂಸ್ಕರಣೆ ಸಾಧ್ಯವಾಗಿಸಲು ಸರಕಾರ ಕ್ರಮಕೈಗೊಂಡಿದೆ. ಮಾರುಕಟ್ಟೆ ಬಗ್ಗೆ ಪರಿಚಯಿಸಲು ನಗರದ ಎಂಬಿಎ ಕಾಲೇಜಿನ ವಿದ್ಯಾರ್ಥಿಗಳ ಸಹಕಾರ ಪಡೆಯಲಾಗುತ್ತಿದೆ. ಎಂಬಿಎ ವಿದ್ಯಾರ್ಥಿಗಳು ಮುಂದೆ ಉದ್ಯಮಿಗಳಾಗಲಿದ್ದು, ಬೆಲ್ಲವನ್ನು ಬಳಸಿ ಯಾವ ಯಾವ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಪರಿಚಯಿಸು ಕೆಲಸ ಮಾಡುತ್ತಿದ್ದಾರೆ ಎಂದರು.
ಜಿ.ಪಂ ಸಿಇಒ ಟಿ.ಭೂಬಾಲನ್, ಬವಿವ ಸಂಘದ ಎಂಬಿಎ ಕಾಲೇಜಿನ ಪ್ರಾಚಾರ್ಯ ಆರ್.ಜಿ. ಅಳ್ಳೊಳ್ಳಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ|ಮೌನೇಶ್ವರಿ ಕಮ್ಮಾರ, ಎಂ.ಬಿ.ಎ ಕಾಲೇಜಿನ ಅಶೋಕ ಉಟಗಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಪಾಟೀಲ, ಕೃಷಿ ವಿಜ್ಞಾನಿ ಬಿ.ಎಚ್.ಬಿರಾದಾರ, ಸಂಪನ್ಮೂಲ ವ್ಯಕ್ತಿಗಳಾದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಯಲ ಹಿರಿಯ ವಿಜ್ಞಾನ ಡಾ| ಬಾಬಾಸಾಹೇಬ ಬೋರಸೆ, ಧಾರವಾಡದಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ| ಹೇಮಲತಾ ಪೋದ್ದಾರ, ಬಿವಿವ ಸಂಸ್ಥೆಯ ಇಂಜಿನೀಯರಿಂಗ್ ಕಾಲೇಜಿನ ಪ್ರಾದ್ಯಾಪಕ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮೇಟಿ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ
ಪ್ರಸಕ್ತ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿಗೆ ಆಯ್ಕೆಯಾದ ರೈತರನ್ನು ಸನ್ಮಾನಿಸಲಾಯಿತು. ಬಾದಾಮಿ ತಾಲೂಕಿನ ಶಂಕರಗೌಡ ವೀರನಗೌಡ, ಜ್ಞಾನೇಶ್ವರ ವಿಠಲ ಮುಂದಿನಮನಿ, ಬಾಗಲಕೋಟೆಯ ಗೋವಿಂದ ಭಜಂತ್ರಿ, ಬೀಳಗಿಯ ಸುನೀತಾ ಮೇಟಿ, ಯಲ್ಲಪ್ಪ ಹಳ್ಳೂರ, ಜಮಖಂಡಿಯ ಶಶಿಕಾಂತ ಗಲಗಲಿ, ಚಿದಾನಂದ ಹಂದಿಗುಂದ, ಸಂತೋಷ ಮೈಗೂರ, ಮುಧೋಳ ತಾಲೂಕಿನ ಶಂಕರ ಗಣಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಎಂಬಿಎ ವಿದ್ಯಾರ್ಥಿಗಳಿಂದ ಬೆಲ್ಲದ ಉತ್ಪನ್ನಗಳ ಪ್ರದರ್ಶನ ವಿದ್ಯಾಗಿರಿಯ ಬೀಮ್ಸ್ ಎಂಬಿಎ ಕಾಲೇಜಿನ ವಿದ್ಯಾರ್ಥಿಗಳು ಬೆಲ್ಲದಿಂದ ಎನೆಲ್ಲ ಉತ್ಪನ್ನಗಳನ್ನು ತಯಾರಿಸಬಹುದೆಂಬುದನ್ನು ಪ್ರದರ್ಶನದ ಮೂಲಕ ತೋರಿಸಿಕೊಟ್ಟರು. ಬೆಲ್ಲದಿಂದ ತಯಾರಿಸಲಾದ ವಿವಿಧ ಉತ್ಪನ್ನಗಳಾದ ಹುಳ್ಳಿ ಸಂಗಟಿ, ಗಸಗಸ ಪಾಯಿಸಾ, ಬೆಲ್ಲದ ಅನ್ನ, ಸಿರಿದಾನ್ಯಗಳ ಲಾಡು, ರಾಗಿ ಲಾಡು, ಬುಟಾ ಕಡಬು, ಶೇಂಗಾ ಚಿಕ್ಕಿ, ಬೆಲ್ಲದಗಾರಿಗೆ, ಉದುರು ಸಜ್ಜಕ, ಶೇಂಗಾ ಉಚಿಡಿ, ನವಣೆಯ ಹೋಳಿಗೆ, ಮಾದ್ಲಿ, ವಿಲೇಟ ಬಲ್ವಾ, ಲಡಕಿ ಲಾಡು, ಶೇಂಗಾ ಅಂಟು, ಮಿಠಾಯಿ ಹಾಗೂ ಮುಖದ ಕಾಂತಿಗೆ ಬೆಲ್ಲದ ಫೇಸ್ ಸ್ಕರ್ಬ್ ಮತ್ತು ಹೇರ್ ಮಾಸ್ಕ್ ಪ್ರದರ್ಶಿಸಿದರು.