Advertisement

ಈಡೇರುತ್ತಿರುವ ಒಂದೂವರೆ ದಶಕದ ಬೇಡಿಕೆ: ಸೇತುವೆ ಕಾಮಗಾರಿ ಪ್ರಗತಿಯಲ್ಲಿ

03:05 PM May 22, 2023 | Team Udayavani |

ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವ ಹಲವು ವರ್ಷಗಳ ಬೇಡಿಕೆಯಾಗಿರುವ ಚೆನ್ನಾವರ-ಕುಂಡಡ್ಕ ಸೇತುವೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Advertisement

ಕುಂಡಡ್ಕದಲ್ಲಿ ಗೌರಿ ಹೊಳೆಗೆ ನಿರ್ಮಿಸಿದ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿ, ಕುಸಿಯುವ ಹಂತದಲ್ಲಿತ್ತು. ಇದರಿಂದಾಗಿ ಈ ಭಾಗದ ಜನರು ಸಂಪರ್ಕ ಕಡಿತದ ಭೀತಿಯಲ್ಲಿಯೇ ದಿನಕಳೆಯುತ್ತಿದ್ದರು.
ಈ ಸೇತುವೆಯ ಪಿಲ್ಲರ್‌ ಶಿಥಿಲವಾಗಿ ದ್ದಲ್ಲದೆ ಅಗಲ ಕಿರಿದಾದ ಈ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಹೋಗುವ ಹಾಗೆ ಇತ್ತು.

ಈ ಸೇತುವೆಯು ಸುಳ್ಯ ವಿಧಾನಸಭೆ ಕ್ಷೇತ್ರಕ್ಕೊಳಪಟ್ಟಿದೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ತೆರಳಬೇಕಾದ ಸಂದಿಗ್ಧತೆಯಿತ್ತು.

ಇಲ್ಲಿ ನೂತನ ಸೇತುವೆ ನಿರ್ಮಿಸುವಂತೆ ಈ ಭಾಗದ ಜನತೆ ಹಾಗೂ ಸಂಘ ಸಂಸ್ಥೆಗಳು ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಿಗೆ ,ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರೂ ಸೇತುವೆ ನಿರ್ಮಾಣದ ಭರವಸೆ ಈಡೇರಿದ್ದು ಮಾತ್ರ 2022ರಲ್ಲಿ. 2023 ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಂಡಿದೆ. ಇದೀಗ ಕಾಮಗಾರಿ ಪ್ರಗತಿಯಲ್ಲಿದೆ.
ಸಂಸದ ನಳಿನ್‌ಕುಮಾರ್‌ಕಟೀಲು ಅವರು ಚೆನ್ನಾವರ-ಕುಂಡಡ್ಕ ಸೇತುವೆ ನಿರ್ಮಾಣಕ್ಕೆ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ. ಪಾಟೀಲ್‌ ಅವರಿಗೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಸಚಿವ ಅಂಗಾರ ಅವರೂ ಅನುದಾನ ನೀಡುವಂತೆ ಮನವಿ ಮಾಡಿದ್ದರು.
ಇವರ ಕೋರಿಕೆಯಂತೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿಗಾಗಿ ಲೋಕೋಪ ಯೋಗಿ ಇಲಾಖೆಯ ಮೂಲಕ 4.5 ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು.

ತಾರಿಪಡ್ಪುವಿನಿಂದ ಚೆನ್ನಾವರದವರೆಗೆ ರಸ್ತೆ ಅಭಿವೃದ್ಧಿಯಾಗಿದೆ. ಚೆನ್ನಾವರ- ಕುಂಡಡ್ಕ ಸಂಪರ್ಕ ಸೇತುವೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Advertisement

ಯಾರಿಗೆ ಪ್ರಯೋಜನ
ಈ ಸೇತುವೆ ನಿರ್ಮಾಣದಿಂದ ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ, ಬೆಳಂದೂರು ಕಾಲೇಜುಗಳಿಗೆ ಹೋಗುವವರಿಗೆ ಅನು ಕೂಲವಾಗಿದೆ. ಅಲ್ಲದೆ ಪಾಲ್ತಾಡಿ ನಿಂದ ಸವಣೂರು, ಪೆರುವಾಜೆ ಹೋಗುವ ವರಿಗೂ ಅನುಕೂಲವಾಗಿದೆ.

ತಾರಿಪಡು³-ಚೆನ್ನಾವರ ರಸ್ತೆ ಅಭಿವೃದ್ಧಿ ಹಾಗೂ ಚೆನ್ನಾವರ-ಕುಂಡಡ್ಕ ಸೇತುವೆ ನಿರ್ಮಾಣ ಕುರಿತಂತೆ ಹಲವು ವರ್ಷಗಳ ಬೇಡಿಕೆ ಈಡೇರುವ ಮೂಲಕ 15 ವರ್ಷಗಳ ಬೇಡಿಕೆ ಈಡೇರಿದೆ.
-ಪುಟ್ಟಣ್ಣ ನಾಯ್ಕ,ಅಧ್ಯಕ್ಷರು, ಅಭ್ಯುದಯ ಯುವಕ ಮಂಡಲ ಚೆನ್ನಾವರ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next