Advertisement
ಮಾಣಿ- ಮೈಸೂರು ರಸ್ತೆ ಅಭಿವೃದ್ಧಿ ಸಂದರ್ಭ ಸೇತುವೆ ಅಗಲ ಕಡಿಮೆ ಮಾಡಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಪ್ರಯಾಣಿಕರು, ವಾಹನ ಚಾಲಕರು ದೂರುತ್ತಿದ್ದಾರೆ. ಸೇತುವೆ ಬದಿಗಳನ್ನು ಸಾಕಷ್ಟು ಗಟ್ಟಿಯಾಗಿ ಎತ್ತರಕ್ಕೆ ನಿರ್ಮಾಣ ಮಾಡದೆ ಇರುವುದರಿಂದ ವಾಹನಗಳು ರಸ್ತೆಯಿಂದ ಕೆಳಗೆ ಉರುಳುತ್ತಿವೆ. ವಾಹನ ಚಾಲಕನ ಗಮನ ಸ್ವಲ್ಪ ಬೇರೆಡೆಗೆ ಹೋದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಕಡೆಪಾಲದಲ್ಲಿ ಅವೈಜ್ಞಾನಿಕ ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಅನೇಕ ವಾಹನಗಳು ಇದರಿಂದ ಕೆಳಗಡೆ ಉರುಳಿ ಬಿದ್ದಿವೆ. ಹೆಚ್ಚಾಗಿ ವಾಹನಗಳು ರಾತ್ರಿ ಹೊತ್ತಿನಲ್ಲಿ ಕೆಳಗಡೆ ಉರುಳಿ ಬೀಳುತ್ತವೆ. ಇದರಿಂದ ಅಪಾಯ ಮತ್ತಷ್ಟು ಹೆಚ್ಚು. ಪ್ರತಿಭಟನೆ ಎಚ್ಚರಿಕೆ
ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಮಾಡಿದ್ದ ಹಿನ್ನೆಲೆಯಲ್ಲಿ ಕಡೆಪಾಲ ಸಮೀಪ ಆಗಾಗ ವಾಹನಗಳು ಅಪಾಘತಕ್ಕೀಡಾಗಿ ತೋಡಿಗೆ ಉರುಳಿ ಬೀಳುತ್ತಿವೆ.
Related Articles
Advertisement
ಸೂಕ್ತ ಕ್ರಮ ಅಗತ್ಯಮಾಣಿ – ಮೈಸೂರು ರಸ್ತೆಯ ಕಡೆಪಾಲದಲ್ಲಿ ಅವೈಜ್ಞಾನಿವಾಗಿ ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ವಾಹನಗಳು ಆಗಾಗ್ಗೆ ಅಪಘಾತಕ್ಕೆ ಒಳಗಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
– ರಮೇಶ್, ವಾಹನ ಚಾಲಕ ಚರ್ಚಿಸಿ ನಿರ್ಧಾರ
ಅಲ್ಲಿ ವಾಹನ ಅಪಘಾತಕ್ಕೀಡಾಗುವುದು ಹೌದು.ನಾವು ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಸೇತುವೆ ಸಮಸ್ಯೆಯ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ.
– ಸುಂದರಿ ಮುಂಡಡ್ಕ ಸಂಪಾಜೆ ಗ್ರಾ.ಪಂ. ಅಧ್ಯಕ್ಷರು ತೇಜೇಶ್ವರ್ ಕುಂದಲ್ಪಾಡಿ