Advertisement

ಸೈಬರ್‌ ಚೋರರ ಸ್ವರ್ಗ; ಕರ್ನಾಟಕವೇ ಕಳ್ಳರ ಗುರಿ; 6 ಗ್ಯಾಂಗ್‌ ಪತ್ತೆಹಚ್ಚಿರುವ ಪೊಲೀಸರು

12:52 AM Nov 30, 2022 | Team Udayavani |

ಬೆಂಗಳೂರು: ಉತ್ತರ ಭಾರತ ಮತ್ತು ವಿದೇಶಗಳಲ್ಲಿ ಕುಳಿತು ದಿನಕ್ಕೊಂದು ಹೊಸ ಮಾರ್ಗದ ಮೂಲಕ ಕರ್ನಾಟಕವನ್ನೇ ಗುರಿ ಮಾಡಿ ಕೋಟ್ಯಂತರ ರೂ. ಲಪಟಾಯಿಸಿರುವ ಆರು ಕುಖ್ಯಾತ ಸೈಬರ್‌ ಕಳ್ಳರ ಗ್ಯಾಂಗ್‌ಗಳನ್ನು ರಾಜ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

Advertisement

ದೇಶದಲ್ಲೇ ಸೈಬರ್‌ ಅಪರಾಧ ಪ್ರಕರಣ ಗಳಲ್ಲಿ ಮೊದಲ ಸ್ಥಾನದಲ್ಲಿರುವ ಸಿಲಿಕಾನ್‌ ಸಿಟಿ ಕುರಿತು ರಾಷ್ಟ್ರ ವ್ಯಾಪಿ ಚರ್ಚೆಗಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಸೈಬರ್‌ ಕ್ರೈಂ ಎಸಗಿರುವ ದೇಶದ ಪ್ರಮುಖ 6 ಗ್ಯಾಂಗ್‌ಗಳ ಕೃತ್ಯದ ಮಾಹಿತಿ ಸೈಬರ್‌ ಪೊಲೀಸರ ಕೈ ಸೇರಿದೆ. ಪೊಲೀಸ್‌ ಮೂಲಗಳ ಪ್ರಕಾರ ಈ ತಂಡಗಳು ರಾಜ್ಯದವರಿಂದ 120 ಕೋಟಿ ರೂ.ಗೂ ಅಧಿಕ ಹಣ ಲಪ ಟಾಯಿ ಸಿವೆ. 2019ರಿಂದ 2022ರ ವರೆಗೆ ರಾಜ್ಯದಲ್ಲಿ ದಾಖಲಾದ 38,805 ಸೈಬರ್‌ ಕ್ರೈಂ ಪ್ರಕರಣಗಳ ಪೈಕಿ ಶೇ. 55ರಷ್ಟು ಪಾಲು ಈ ಗ್ಯಾಂಗ್‌  ಗಳ ದ್ದಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸ್‌ ಮೂಲಗಳು ತಿಳಿಸಿವೆ.

6 ಗ್ಯಾಂಗ್‌ಗಳು ಯಾವುವು?
1.ವಿದೇಶಿ ಗ್ಯಾಂಗ್‌
ಈ ವಿದೇಶಿ ಗ್ಯಾಂಗ್‌ನ ಕೃತ್ಯದ ಅಪರಾಧ ಶೈಲಿಯೇ ಭಿನ್ನ. ಇದರ ಸದಸ್ಯರು ಚೀನ, ಇಂಡೋನೇಷ್ಯಾ, ಹಾಂಕಾಂಗ್‌ನಲ್ಲಿ ಕುಳಿತು ಬಿಟ್‌ ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವು ದಾಗಿ ಇನ್‌ಸ್ಟಾಗ್ರಾಂನಲ್ಲಿ ಲಿಂಕ್‌ ಕಳುಹಿಸಿ ಪ್ರಚೋದಿಸುತ್ತಾರೆ. ಆಮಿಷಕ್ಕೊಳಗಾಗಿ ಅವರ ಬ್ಯಾಂಕ್‌ ಖಾತೆಗೆ ದುಡ್ಡು ಹಾಕಿದರೆ ಮತ್ತೆ ಹಣ ವಾಪಸ್‌ ಬರುವುದಿಲ್ಲ. ಪೊಲೀಸರಿಗೆ ಸುಳಿವು ಸಿಗದಂತೆ ನಕಲಿ ವೆಬ್‌ಸೈಟ್‌ ಸೃಷ್ಟಿಸಿ ಈ ಗ್ಯಾಂಗ್‌ ಕೃತ್ಯ ಎಸಗುತ್ತಿರುವುದು ಪತ್ತೆಯಾಗಿದೆ.

2.ರಾಜಸ್ಥಾನಿ ಅಳ್ವಾರ್‌ ಸಿಟಿ ಗ್ಯಾಂಗ್‌
ಸೇನಾ ಸಿಬಂದಿಯ ಸೋಗಿನಲ್ಲಿ ಬಾಡಿಗೆ ಮನೆ ಪಡೆಯುವುದು, ಕಡಿಮೆ ಬೆಲೆಗೆ ವಾಹನ ಮಾರಾಟ ಮಾಡುವುದಾಗಿ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುವುದೇ ಈ ತಂಡದ ಶೈಲಿ. ಮನೆ ಬಾಡಿಗೆಗಿದೆ ಎಂದು ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕುವವರಿಗೆ ಸೇನಾ ಸಿಬಂದಿಯ ಸೋಗಿನಲ್ಲಿ ಕರೆ ಮಾಡಿ ಮನೆ ಬಾಡಿಗೆಗೆ ಪಡೆಯಲು ಮುಂಗಡ ಹಣ ಕೊಡುವುದಾಗಿ ನಂಬಿಸುತ್ತಾರೆ. ಕ್ಯುಆರ್‌ ಕೋಡ್‌ ಸ್ಕಾ éನ್‌ ಮಾಡಲು ಹೇಳಿ ಬ್ಯಾಂಕ್‌ ಖಾತೆಯಲ್ಲಿರುವ ಹಣ ಲಪಟಾಯಿಸುತ್ತಾರೆ.

3. ದಿಲ್ಲಿಯ ನೋಯ್ಡಾ ತಂಡ
ವಿದೇಶಿ ಪ್ರಜೆಗಳ ಸೋಗಿನಲ್ಲಿ ಫೇಸ್‌ಬುಕ್‌ ಮೂಲಕ ರಾಜ್ಯದ ಶ್ರೀಮಂತ ಅಥವಾ ಉದ್ಯೋಗಸ್ಥ ಮಹಿಳೆಯ ರನ್ನೇ ಈ ಗ್ಯಾಂಗ್‌ ಗುರಿ ಮಾಡು ತ್ತಿದೆ. ನಿರಂತರವಾಗಿ ಚಾಟ್‌ ಮಾಡಿ ನಂಬಿಕೆ ಗಿಟ್ಟಿಸಿಕೊಂಡ ಬಳಿಕ ವಿದೇಶ ದಿಂದ ಬೆಲೆಬಾಳುವ ಉಡುಗೊರೆ ಕಳುಹಿಸಿರುವುದಾಗಿ ಹೇಳುತ್ತಾರೆ. ಇದಾದ 2-3 ದಿನಗಳಲ್ಲಿ ಏರ್‌ಪೋರ್ಟ್‌ ಕಸ್ಟಮ್ಸ್‌ ಸಿಬಂದಿಯ ಸೋಗಿನಲ್ಲಿ ಮತ್ತೆ ಕರೆ ಮಾಡಿ ಉಡುಗೊರೆ ಪಡೆಯಲು ಶುಲ್ಕ ಪಾವತಿಸುವಂತೆ ಹೇಳುತ್ತಾರೆ. ದುಡ್ಡು ಲಭಿಸಿದ ಬಳಿಕ ಮಾಯವಾಗುತ್ತಾರೆ.

Advertisement

4. ಗುಜರಾತಿ ಹನಿಟ್ರ್ಯಾಪ್‌ ಗ್ಯಾಂಗ್‌
ಗುಜರಾತ್‌ ಜಿಲ್ಲೆಯೊಂದರ “ಹನಿಟ್ರ್ಯಾಪ್‌ ಗ್ಯಾಂಗ್‌’ ಫೇಸ್‌ಬುಕ್‌, ಇನ್‌ಸ್ಟಾ ಗ್ರಾಂ, ಟೆಲಿಗ್ರಾಂ ನಂತಹ ಸಾಮಾಜಿಕ ಜಾಲತಾಣ ಗಳಲ್ಲಿ ಹದಿಹರೆಯದ ಯುವಕರನ್ನೇ ಗುರಿ ಮಾಡುತ್ತದೆ. ಗ್ಯಾಂಗ್‌ನ ಸುಂದರ ಯುವತಿ ಯರು ನಗ್ನ ವೀಡಿಯೋ ಕರೆ ಮಾಡಿ ತಮ್ಮ ಬಲೆಗೆ ಬೀಳುವ ಯುವಕರನ್ನು ಪ್ರಚೋದಿಸುತ್ತಾರೆ. ಬಳಿಕ ಅವರ ನಗ್ನ ವೀಡಿಯೋ ರೆಕಾರ್ಡ್‌ ಮಾಡಿ ಮೆಸೆಂಜರ್‌ನಲ್ಲಿ ಅವರಿಗೆ ಕಳುಹಿಸಿ ಬ್ಲ್ಯಾಕ್‌ವೆುàಲ್‌ ಮಾಡು ತ್ತಾರೆ. ದುಡ್ಡು ಕಳುಹಿಸದಿದ್ದರೆ ಸಾಮಾ ಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌ ಮಾಡುವುದಾಗಿ ಬೆದರಿಸುತ್ತಾರೆ.

5. ಪಶ್ಚಿಮ ಬಂಗಾಲ ಗ್ಯಾಂಗ್‌
ಇತ್ತೀಚೆಗೆ ರಾಜ್ಯದಲ್ಲಿ ಅತೀ ಹೆಚ್ಚಾಗಿ ದಾಖ   ಲಾಗು ತ್ತಿರುವ ಸೈಬರ್‌ ಕ್ರೈಂ ಪೈಕಿ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ತುರ್ತು ವಿದ್ಯುತ್‌ ಬಿಲ್‌ ಪಾವತಿಸುವಂತೆ ಹೇಳಿ ವಂಚಿ ಸುತ್ತಿರುವುದೂ ಒಂದು. ಇದು ಪಶ್ಚಿಮ ಬಂಗಾಲ ಗ್ಯಾಂಗ್‌ನ ಕೃತ್ಯ ಎಂಬುದಕ್ಕೆ ರಾಜ್ಯ ಪೊಲೀಸ ರಿಗೆ ಸಾಕ್ಷ್ಯ ಸಿಕ್ಕಿದೆ. “ನಾವು ಬೆಸ್ಕಾಂ ಅಧಿ ಕಾರಿ ಗಳು. ಆನ್‌ಲೈನ್‌ ಮೂಲಕ ತಮ್ಮ ಖಾತೆಗೆ ತುರ್ತಾಗಿ 25 ಸಾವಿರ ರೂ. ಹಾಕಿ. ಇಲ್ಲ ದಿದ್ದರೆ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿ ಸುವು ದಾಗಿ’ ಈ ಗ್ಯಾಂಗ್‌ ಬೆದರಿಸಿ ದುಡ್ಡು ವಸೂಲು ಮಾಡುತ್ತಿದೆ.

6. ಜಮ್ತಾರಾ ಗ್ಯಾಂಗ್‌
ಬ್ಯಾಂಕ್‌ ಸಿಬಂದಿಯ ಸೋಗಿನಲ್ಲಿ ಕರೆ ಮಾಡಿ ಮೊಬೈಲ್‌ಗೆ ಕಳುಹಿಸಿದ ಒಟಿಪಿ ಪಡೆದು ಕ್ಷಣ ಮಾತ್ರದಲ್ಲಿ ಬ್ಯಾಂಕ್‌ ಖಾತೆಗೆ ಕನ್ನ ಹಾಕು ವ ಖತರ್ನಾಕ್‌ ತಂಡವೇ ಜಮ್ತಾರಾ ಗ್ಯಾಂಗ್‌. ಝಾರ್ಖಂಡ್‌ನ‌ ಪುಟ್ಟ ಹಳ್ಳಿಯಲ್ಲಿರುವ ಗುಂಪೊಂದು 6 ವರ್ಷಗಳ ಹಿಂದೆ ಎಸಗಿದ ಸೈಬರ್‌ ಕಳ್ಳತನ ಇಂದು ಆ ಗ್ರಾಮದಾದ್ಯಂತ ವಿಸ್ತರಿಸಿದೆ. ಈ ಹಿಂದೆ ರಾಜ್ಯ ಪೊಲೀಸರು ಝಾರ್ಖಂಡ್‌ಗೆ ತೆರಳಿದ್ದರೂ ಅಲ್ಲಿನ ಸ್ಥಳೀಯ ಪೊಲೀಸರು, ರಾಜಕಾರಣಿಗಳು ಆರೋಪಿಗಳಿಗೆ ಬೆಂಗಾವಲಾಗಿ ನಿಂತ ಕಾರಣ ಕಳ್ಳರನ್ನು ಸೆರೆಹಿಡಿಯಲು ಸಾಧ್ಯವಾಗಿಲ್ಲ.

29ಸೈಬರ್‌ ಕಳ್ಳರಿಗೆ ಶಿಕ್ಷೆ
2019ರಿಂದ 2022ರ ವರೆಗೆ ರಾಜ್ಯದಲ್ಲಿ ಕೇವಲ 29 ಸೈಬರ್‌ ಕಳ್ಳರು ಜೈಲು ಸೇರಿದ್ದಾರೆ. 18,787 ಪ್ರಕರಣ ಗಳಲ್ಲಿ ಆರೋಪಿ ಗಳ ಸಣ್ಣ ಸುಳಿವೂ ಸಿಕ್ಕಿಲ್ಲ. 11,119 ಪ್ರಕರಣಗಳು ತನಿಖಾ ಹಂತದಲ್ಲಿವೆ.

ಸೈಬರ್‌ ಕ್ರೈಂ ಗ್ಯಾಂಗ್‌ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅಪರಿಚಿತರಿಗೆ ವೈಯಕ್ತಿಕ ಮಾಹಿತಿ ನೀಡಬೇಡಿ. ಪೊಲೀಸರು ಸೈಬರ್‌ ಕಳ್ಳರ ಮೇಲೆ ನಿಗಾ ಇರಿಸಿದ್ದಾರೆ.
– ಡಾ| ಅನೂಪ್‌ ಎ. ಶೆಟ್ಟಿ , ಡಿಸಿಪಿ, ಉತ್ತರ ವಿಭಾಗ


- ಅವಿನಾಶ್‌ ಮೂಡಂಬಿಕಾನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next