Advertisement

ಕಬ್ಬಿಣದ ತಂತಿ ಬಳಸಿ ಗೂಡು ಕಟ್ಟಿದ ಕಾಗೆ!

02:05 PM Sep 29, 2022 | Team Udayavani |

ಸುಳ್ಯ: ಸಾಮಾನ್ಯವಾಗಿ ಪಕ್ಷಿಗಳು ಮರದ ಎಲೆ, ಹುಲ್ಲು, ಸಣ್ಣ- ಪುಟ್ಟ ಕಡ್ಡಿ, ನಾರು ಪದಾರ್ಥದಂತಹ‌ ಒಣ ವಸ್ತುಗಳಿಂದ ಗೂಡುಗಳನ್ನು ಕಟ್ಟಿಕೊಂಡು ಜೀವಿಸುತ್ತವೆ. ಆದರೆ ಇಲ್ಲೊಂದು ಪಕ್ಷಿ ಕಬ್ಬಿಣದ ತಂತಿಗಳನ್ನು ಬಳಸಿ ಗೂಡು ಕಟ್ಟಿಕೊಂಡಿದ್ದುದು ಬೆಳಕಿಗೆ ಬಂದಿದೆ. ಚೊಕ್ಕಾಡಿಯ ಭಗವಾನ್‌ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಈ ಘಟನೆ ಬೆಳಕಿದೆ ಬಂದಿದೆ.

Advertisement

ಇಲ್ಲಿನ ಆವರಣದೊಳಗಿನ ಮರದ ಗೆಲ್ಲನ್ನು ಅಪಾಯಕಾರಿ ಸ್ಥಿತಿಯ ಹಿನ್ನೆಲೆಯಲ್ಲಿ ತೆರವುಗೊಳಿಸಲು ಮುಂದಾದಾಗ ಅಲ್ಲಿ ಕಾಗೆಯ ಎರಡು ಗೂಡುಗಳು ಪತ್ತೆಯಾಗಿದೆ. ಆ ಪೈಕಿ ಒಂದರಲ್ಲಿ ಕಾಗೆ ವಾಸ್ತವ್ಯ ಮಾಡುತ್ತಿತ್ತು. ಇದರಿಂದಾಗಿ ಕೊಂಬೆ ತೆರವು ಮಾಡದೆ ಕಾಗೆಗಳ ವಾಸ್ತವ್ಯ ಇಲ್ಲದ ಗೂಡನ್ನು ಪರಿಶೀಲನೆ ಮಾಡಿದ ವೇಳೆ ಸುಮಾರು ಎರಡು ಕೆಜಿಯಷ್ಟು ಸಣ್ಣ-ಪುಟ್ಟ ಕಬ್ಬಿಣದ ತಂತಿಗಳಿಂದಲೇ ಗೂಡು ರಚಿಸಿರುವುದು ಕಂಡು ಬಂದಿದೆ.

ಕಾಗೆಗಳು ವಾಸವಿದ್ದ ಇನ್ನೊಂದು ಗೂಡು ಕೂಡಾ ಕಬ್ಬಿಣದ ತಂತಿಗಳಿಂದಲೇ ನಿರ್ಮಾಣವಾಗಿತ್ತು. ಅದನ್ನು ಮರದಲ್ಲೇ ಉಳಿಸಲಾಗಿದೆ. ಇದೀಗ ಈ ಖಾಲಿ ಕಾಗೆ ಗೂಡನ್ನು ಇದೇ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next