Advertisement
ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಯುತ್ತಿದ್ದು ದುರಸ್ತಿ ಮಾಡುವ ಸಂದರ್ಭದಲ್ಲಿ ಕಾಲುವೆಯಲ್ಲಿ ಅಲ್ಲಲ್ಲಿ ಮಣ್ಣು ಹಾಗೂ ಕಲ್ಲುಗಳ ಸಂಗ್ರಹದಿಂದಾಗಿ ನೀರು ಮುಂದೆ ಹೋಗಲಾಗದೆ ಸಾಣಾಪುರ ಹತ್ತಿರ ನದಿ ಪಕ್ಕದ ಕಾಲುವೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದರಿಂದ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ತುಂಗಭದ್ರಾ ನದಿ ಪಾಲಾಗುತ್ತಿದೆ ಈ ಮಧ್ಯೆ ತುಂಗಭದ್ರ ನದಿಗೆ ಮಂಗಳವಾರ ಸಂಜೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಟ್ಟಿರುವುದರಿಂದ ಕಾಲುವೆಯಲ್ಲಿ ಅತಿ ಉದ್ದವಾದ ರಂಧ್ರ ಬೀಳುವ ಸಂಭವ ಹೆಚ್ಚಿದೆ. ಕಾಲುವೆಗೆ ನೀರು ಹರಿಸುವ ಮುನ್ನ ಕಾಲುವೆಯಲ್ಲಿ ಮಣ್ಣು ಕಲ್ಲುಗಳನ್ನು ತೆಗೆದು ನೀರು ಬಿಟ್ಟಿದ್ದರೆ ಕಾಲುವೆಯಲ್ಲಿ ಬೋಂಗಾ ಬೀಳುತ್ತಿರಲಿಲ್ಲ .
Related Articles
Advertisement
ವಿಜಯನಗರ ಕಾಲುವೆಗೆ ಜುಲೈ ಆಪ್ತರಿಂದ ನೀರು ಹರಿಸುವ ಬಗ್ಗೆ ನೀರಾವರಿ ಸಲಹಾ ಸಮಿತಿ ಮುಂಚಿತವಾಗಿಯೇ ನಿಗದಿ ಮಾಡಿದ್ದರೂ ವಿಜಯನಗರ ಕಾಲುವೆ ನಿರ್ವಹಣೆ ಮಾಡುವ ಜಲಸಂಪನ್ಮೂಲ ಅಧಿಕಾರಿಗಳಾಗಲಿ ಅಥವಾ ಕಾಲುವೆಯನ್ನು ದುರಸ್ತಿ ಮಾಡಿದ ಗುತ್ತಿಗೆದಾರರಾಗಲಿ ಮುಂಚಿತವಾಗಿ ಆಗಮಿಸಿ ಕಾಲುವೆಯ ಎಸ್ಕೇಪ್ ಗಳನ್ನ ಎತ್ತುವುದಾಗಲಿ ಅಥವಾ ಕಾಲುವೆಯಲ್ಲಿದ್ದ ಮಣ್ಣು ಮತ್ತು ಕಲ್ಲುಗಳನ್ನು ಬದಿಗೆ ಸರಿಸುವ ಕಾರ್ಯ ಮಾಡಿರಲಿಲ್ಲ .ಇದರಿಂದಾಗಿ ಮಂಗಳವಾರ ಸಂಜೆ ವಿಜಯನಗರ ಕಾಲುವೆ ಸಾಣಾಪುರ ಹತ್ತಿರ ಬಿರುಕು ಕಾಣಿಸಿಕೊಂಡು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಜೊತೆಗೆ ಕಾಲುವೆಯ ತಡೆಗೋಡೆ ಕುಸಿಯುವ ಹಂತ ತಲುಪಿದೆ .
ಸ್ಥಳಕ್ಕೆ ಭೇಟಿ ನೀಡಿದ ಸಾಣಾಪುರದ ರೈತರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಕರೆಯ ಮೂಲಕ ವಿಜಯನಗರ ಕಾಲುವೆಯಲ್ಲಿ ರಂಧ್ರ ಬಿದ್ದಿರುವ ಕುರಿತು ಮಾಹಿತಿ ನೀಡಿದರು ಯಾವ ಅಧಿಕಾರಿಯೂ ಇತ್ತ ಕಡೆ ಸುಳಿಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ .