ಪ್ರಾಣಿಹಿಂಸೆ ಮಹಾಪಾಪ. ಆದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಅನೇಕರು ಪ್ರಾಣಿಗಳಿಗೆ ಹಿಂಸೆ ನೀಡುತ್ತಲೇ ಇದ್ದಾರೆ. ಅದೇ ರೀತಿ ನಾಯಿಯೊಂದಕ್ಕೆ ಹಿಂಸಿಸುತ್ತಿದ್ದ ಮನುಷ್ಯನಿಗೆ ಹಸುವೊಂದು ತಕ್ಕ ಶಿಕ್ಷೆ ನೀಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವ್ಯಕ್ತಿಯೊಬ್ಬ ನಾಯಿಯ ಮುಖ ಹಿಡಿದುಕೊಂಡು ಅದನ್ನು ಮೇಲೆ ಕೆಳಗೆ ಎಳೆದಾಡುತ್ತಿದ್ದಾನೆ. ಅದನ್ನು ಕೆಲವರು ವೀಡಿಯೋ ಮಾಡಿಕೊಂಡು ನಿಂತಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಹಸುವೊಂದು ಓಡಿಬಂದು, ನಾಯಿಯನ್ನು ಕೊಂಬಿನಿಂದ ತಳ್ಳಿ, ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ.
ಹಸುವಿನ ದಾಳಿಗೆ ಆತ ಕೆಳಗೆ ಬಿದ್ದಿದ್ದಾನೆ. ಆದರೂ ಬಿಡದ ಹಸು, ಕೊಂಬಿನಿಂದ ಆತನನ್ನು ತಿವಿಯಲಾರಂಭಿಸಿದೆ.
ಈ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ವೀಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ರಷ್ಯಾ ಲಸಿಕೆ ಅಭಿಯಾನ ಫ್ಲಾಪ್? ಸ್ಫುಟ್ನಿಕ್ ವಿ ಕೋವಿಡ್ ಲಸಿಕೆ ಬಗ್ಗೆ ಜನರ ನಿರ್ಲಕ್ಷ್ಯ