Advertisement

ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ: ಕೋಡಿಶ್ರೀ

04:03 PM Jun 10, 2023 | Team Udayavani |

ಶ್ರೀನಿವಾಸಪುರ: ಈ ವರ್ಷದಲ್ಲಿ ರೈಲು ದುರಂತಗಳು ಇನ್ನೂ ಒಂದೆರಡು ನಡೆಯಲಿವೆ. ಇದರಿಂದ ಸಾವು ನೋವು ಗಳು ಹೆಚ್ಚು ಸಂಭವಿಸಲಿವೆ. ಹಾಗೆಯೇ ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ. ಯುದ್ಧಗಳು ನಡೆಯುವುದರಿಂದ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ತಾಲೂಕು ನೆಲವಂಕಿ ಹೋಬಳಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಪ್ರಪಂಚದಲ್ಲಿ ಯುದ್ಧ ಭೀತಿ ಇದ್ದು, ಪ್ರಸಕ್ತ ವರ್ಷದಲ್ಲಿ ಗುಡುಗು, ಮಿಂಚು, ಮಳೆ ಹೆಚ್ಚಾಗಲಿದೆ. ಅನೇಕ ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದರು.

ಇದನ್ನೂ ಓದಿ:Shobha Karandlaje ಅವರಿಗೂ ಫ್ರೀ…; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಗರಂ

ಈ ವರ್ಷದಲ್ಲಿ ಭೂಮಿ ಬಿರುಕು ಬಿಡಲಿದೆ. ಸಮಸ್ಯೆಗಳು ಎದುರಾಗಲಿದೆ, ಹಾಗಾಗಿ ಭಯ, ಭಕ್ತಿಯ ಜೊತೆಯಲ್ಲಿ ಜನ ಭಗವಂತನ ಮೊರೆ ಹೋಗಬೇಕಾಗಿದೆ ಎಂದರು. ಭಗವಂತ ಹಲವಾರು ನಾಮಗಳಲ್ಲಿ ಇದ್ದಾನೆ. ಶಿವ, ಯೇಸು, ರಾಮ, ಅಲ್ಲಾ ಇವರ ಸ್ಮರಣೆ ಅಗತ್ಯವಾಗಿದೆ ಮಾನವ ಕುಲವೊಂದೇ. ಹಾಗಾಗಿ ಸಾಮರಸ್ಯದ ನಡುವೆ ಮೋಕ್ಷಕ್ಕೆ ದೈವಾನುಗ್ರಹ ಬೇಕಾಗಿದೆ ಎಂದರು.

Advertisement

ಸಮಾಜಕ್ಕೆ ಸಾಮರಸ್ಯದ ಸೇತುವೆಯಾಗಿ ಈ ಗ್ರಾಮದಲ್ಲಿ ನಡೆಸುತ್ತಿರುವ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುಸ್ಲಿಂ ಸಹೋದರರು ಮುಂದೆ ಬಂದು ಈ ಕಾರ್ಯಕ್ರಮ, ನಡೆಸುತ್ತಿರುವುದು ಶ್ಲಾಘನೀಯವೆಂದರು

Advertisement

Udayavani is now on Telegram. Click here to join our channel and stay updated with the latest news.

Next