Advertisement

‘ಕೈ’ ಟಿಕೆಟಿಗೆ ಆಗ್ರಹಿಸಿ ಕಾಂಗ್ರೆಸ್ ಕಛೇರಿ ಎದುರು ಎಲೆ ಶ್ರೀನಿವಾಸ ವಿಚಿತ್ರ ಪ್ರತಿಭಟನೆ!

10:02 AM Oct 22, 2019 | Hari Prasad |

ಬೆಂಗಳೂರು: ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷದ ಟಿಕೆಟ್ ಗಿಟ್ಟಿಸಲು ಹಲವರು ನಾನಾ ರೀತಿಯ ಪ್ರಯತ್ನಗಳನ್ನು, ಲಾಬಿಗಳನ್ನು ನಡೆಸುತ್ತಾರೆ. ಆದರೆ ಇಲ್ಲೊಬ್ಬರು ಬಹಳ ವಿಶಿಷ್ಟ ರೀತಿಯ ಪ್ರತಿಭಟನೆ ಮೂಲಕ ಉಪಚುನಾವಣೆಯ ಟಿಕೆಟ್ ಗೆ ಬೇಡಿಕೆ ಇರಿಸಿದ್ದಾರೆ. ಈ ರೀತಿಯಾಗಿ ವಿಚಿತ್ರ ಪ್ರತಿಭಟನೆ ನಡೆಸಿದವರು ಎಲೆ ಶ್ರೀನಿವಾಸ್ ಎಂಬ ಕಾಂಗ್ರೆಸ್ ಕಾರ್ಯಕರ್ತ.

Advertisement

ಮುಂಬರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ತನಗೇ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಎಲೆ ಶ್ರೀನಿವಾಸ್ ಅವರು ಇಂದು ತಮ್ಮ ಸ್ವ ಕ್ಷೇತ್ರ ಕೆ.ಆರ್.ಪುರದಿಂದ ಹಳೇ ಕೀ, ಛತ್ರಿ, ತರಕಾರಿ, ನೋಟಿನ ಹಾರ ಹಾಕಿಕೊಂಡು 101 ಜನರೊಂದಿಗೆ ಪಾದಯಾತ್ರೆ ಮೂಲಕ ಕೆಪಿಸಿಸಿ ಕಛೇರಿಗೆ ಬಂದು ಅಲ್ಲಿ ಧರಣಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನೂ ಸಹ ಎಲೆ ಶ್ರೀನಿವಾಸ್ ಅವರು ತಮ್ಮ ಮನವಿಯನ್ನು ಸಲ್ಲಿಸಲಿದ್ದಾರೆ.

ರಾಜ್ಯದಲ್ಲಿ ಸಾಮಾನ್ಯ ಕಾರ್ಯಕರ್ತರನ್ನ ಕಾಂಗ್ರೆಸ್ ಮುಖಂಡರು ಮರೆತಿದ್ದಾರೆ. ಚುನಾವಣಾ ವೀಕ್ಷಕರೂ ಕೂಡ ಕಾರ್ಯಕರ್ತರನ್ನ ಮರೆತಿದ್ದಾರೆ. ಕೇವಲ ಧನ ಬಲ ಇರುವವರಿಗೆ ಮಾತ್ರ ಪಕ್ಷದಲ್ಲಿ ಮಣೆ ಹಾಕಲಾಗುತ್ತಿದೆ ಎಂದವರು ನೇರ ಆರೋಪ ಮಾಡಿದ್ದಾರೆ.

ಈ ಉಪಚುನಾವಣೆಯಲ್ಲಿ ಕೆ.ಆರ್.ಪುರ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೇ ಟಿಕೆಟ್ ನೀಡಬೇಕು ಇಲ್ಲವಾದಲ್ಲಿ ನಾವು 101 ಜನರೂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಎಲೆ ಶ್ರೀನಿವಾಸ್ ಅವರು ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next