Advertisement

ಕನ್ನಡ ಭಾಷೆಯ ಅಭಿವೃದ್ಧಿಗೆ ಸಮಗ್ರ ಕನ್ನಡ ವಿಧೇಯಕ: ನಾಗಾಭರಣ

01:45 AM Jun 15, 2022 | Team Udayavani |

ಉಡುಪಿ: ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ “ಸಮಗ್ರ ಕನ್ನಡ ವಿಧೇಯಕ’ ವನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ ಸಮಗ್ರ ಕನ್ನಡ ಭಾಷಾ ನೀತಿ, ಉದ್ಯೋಗ ಶಿಕ್ಷಣ ಭಾಷಾ ನೀತಿಯ ಅಭಿವೃದ್ಧಿ ನಿರೀಕ್ಷೆ ಹೊಂದಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಮಂಗಳವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಕನ್ನಡ ಭಾಷೆ ಅನುಷ್ಠಾನ ಸಮುದಾಯದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಲಾಖೆಗಳಲ್ಲಿ ಸಮನ್ವಯ ಸಾಧಿಸಿದರೆ ಅಭಿವೃದ್ಧಿ ಪ್ರಾಧಿಕಾರಿಗಳು ಏಳಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಮಾದರಿ ಯಾಗಬೇಕು. ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕನ್ನಡ ಭಾಷೆ ಅನುಷ್ಠಾನವಾಗಬೇಕು. ಆದಿಉಡುಪಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದರು.

ಡಿಡಿಪಿಐಗಳಿಗೆ ಸೂಚನೆ
ಕನ್ನಡ ಭಾಷೆ, ಶಾಲೆಗಳ ಬಗ್ಗೆ ಉತ್ತಮ ನಿಲುವು ತೋರುವಂತೆ ಸರಕಾರಕ್ಕೆ ಹಲವು ದಿನಗಳ ಹಿಂದೆಯೇ ತಿಳಿಸಲಾಗಿದೆ. ಕನ್ನಡ ಕಲಿಕಾ ಅಧಿನಿಯಮದ ಅನುಷ್ಠಾನ ಯಾವ ಜಿಲ್ಲೆಗಳಲ್ಲಿ ಎಷ್ಟು ಆಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಆಯಾಯ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಡಿಸಿ ವೀಣಾ, ಪ್ರಾಧಿಕಾರದ ಸದಸ್ಯರಾದ ಡಾ| ರಮೇಶ್‌, ಮಹೇಶ್‌ ಎನ್‌., ಡಾ| ಸಂತೋಷ್‌ ಹಾನಗಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಅಧಿಕಾರಿಗಳಿಗೆ ಕನ್ನಡ ತರಬೇತಿ
ನಾಗರಿಕ ಸೇವಾ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡುವ ಚಿಂತನೆಯಿದೆ. ಈಗಾಗಲೇ ಕನ್ನಡ ಭಾಷೆ ಬಳಕೆ ಮಾಡದ 105 ಮಂದಿ ಐಎಎಸ್‌ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಬರೆಯಲಾಗಿದೆ ಎಂದು ನಾಗಾಭರಣ ಅವರು ತಿಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next