Advertisement
ಝೈಬುನ್ನೀಸ ಅವರ ಅಜ್ಜಿ ಮನೆ ಉಪ್ಪಿನಂಗಡಿಯ ನಿನ್ನಿಕಲ್‌ಗೆ ಶುಕ್ರವಾರ ಭೇಟಿ ನೀಡಿದ ಅವರು, ಕುಟುಂಬಿಕರನ್ನು ಸಂತೈಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಝೈಬುನ್ನೀಸಾ ಆತ್ಮಹತ್ಯೆ ಬಗ್ಗೆ ಸಂಶಯವಿದೆ. ಈ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿ ಅಧ್ಯಕ್ಷೆ ಕೃಪಾ ಆಳ್ವ ಜತೆ ಮಾತನಾಡಿದ್ದೇನೆ. ಅವರು ಶಾಲೆ ಹಾಗೂ ಮನೆಗೆ ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ. ಝೈಬುನ್ನೀಸ ಶೇ. 97 ಅಂಕ ಪಡೆದ ಪ್ರತಿಭಾವಂತೆ. ವಸತಿ ನಿಲಯದಲ್ಲಿ ಶಿಕ್ಷಕ ರವಿ ಎಂಬಾತ ಕಿರುಕುಳ ನೀಡುತ್ತಿದ್ದ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದು, ಸಾವಿನಲ್ಲಿ ಆತನ ಕೈವಾಡವಿರುವ ಬಗ್ಗೆ ಆರೋಪವಿದೆ. ಈ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡುತ್ತೇನೆ ಹಾಗೂ ಸಿಒಡಿ ತನಿಖೆಗೆ ಆಗ್ರಹಿಸುತ್ತೇನೆ ಎಂದು ಹೇಳಿದರು.
ನನ್ನ ಮಗಳು ಆತ್ಮಹತ್ಯೆ ಮಾಡಿ ಕೊಳ್ಳುವವಳಲ್ಲ. ಕಲಿಕೆಯಲ್ಲಿ ಮುಂದಿದ್ದಳು ಮತ್ತು ದಿಟ್ಟ ಹುಡುಗಿಯಾಗಿದ್ದಳು. ಶಿಕ್ಷಕ ರವಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ, ನನ್ನನ್ನು ಕರೆದು ಕೊಂಡು ಹೋಗಿ ಎಂದಿದ್ದಳು. ನಾನು ಸಮಾಧಾನ ಹೇಳಿ, ನಾಳೆ ಶಾಲೆಗೆ ಬರುವುದಾಗಿ ತಿಳಿಸಿದ್ದೆ. ಇದನ್ನು ಅರಿತ ರವಿ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಝೈಬುನ್ನೀಸ ತಂದೆ ಮಹಮ್ಮದ್ ಇಬ್ರಾಹಿಂ ಸುದ್ದಿಗಾರರೊಂದಿಗೆ ನೋವು ತೋಡಿಕೊಂಡರು.