ಬಾಗಲಕೋಟೆ: ಜಲ ತತ್ವ ಸಿದ್ಧಾಂತ ಪ್ರತಿಪಾದನೆ, ಜಲ ಪೂಜಿಸುವ ಮಳೆ ಆರಾಧನೆಯ ಮಠದ ಶ್ರೀ ಮಳೆರಾಜೇಂದ್ರ ಸ್ವಾಮಿ ಮಠದ ಜಾತ್ರೋತ್ಸವ ನಿಮಿತ್ತ ಹೊಸ ಮುರನಾಳ ಗ್ರಾಮದಲ್ಲಿ ಸೋಮವಾರ ಸಹಸ್ರಾರು ಭಕ್ತರ ಮಧ್ಯೆ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು.
Advertisement
ಬೆಳಗ್ಗೆ ಶ್ರೀ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಅಭಿಷೇಕ ಮಹಾ ಮಂಗಳಾರುತಿ, ಭಗವತದ್ಗೀತಾ ಪಾರಾಯಣ ನಡೆಯಿತು. ವಿಶೇಷ ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹರಕೆ ಹೊತ್ತ ಭಕ್ತರು ಉರುಳು ಸೇವೆ ಮಾಡಿ ಹರಕೆ ತೀರಿಸಿದರು.
ಸೇವೆಯೊಂದಿಗೆ ಭಾಜಾ-ಭಜಂತ್ರಿ ಕರಡಿ ಮಜಲು ಸೇವೆ ನೆರವೇರಿದವು. ಮುಸ್ಲಿಂ ಮಹಿಳೆಯರು ದೀಪದಾರತಿಗಳಿಗೆ ಎಣ್ಣೆ ನೀಡಿದರು. ಸಣ್ಣ ರಥೋತ್ಸವದ ನಂತರ ಶ್ರೀಮಠದಲ್ಲಿ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಸಕಲ ಭಕ್ತರೊಡನೆ ವಿಶೇಷ ಮಂಗಳಾರತಿ
ನೆರವೇರಿಸಲಾಯಿತು. ಸಂಜೆ ಸಹಸ್ರಾರು ಜನರ ಮಧ್ಯ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಮಹಾರಥೋತ್ಸವ ಜರುಗಿತು. ನಂತರ ಸಕಲ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಹಿಂದು-ಮುಸ್ಲಿಂ ಭಾವೈಕ್ಯತೆ ಮಠವಾಗಿದ್ದರಿಂದ ಸಕಲ
ಧರ್ಮದವರು ಪಾಲ್ಗೊಂಡಿದ್ದರು.