Advertisement

ಕಾಳಜಿಯುಳ್ಳ, ಧೈರ್ಯಶಾಲಿ ಮಹಿಳೆ

09:40 AM Aug 09, 2019 | Team Udayavani |

“ಸುಷ್ಮಾ ಸ್ವರಾಜ್‌ ಅತ್ಯಂತ ಕಾಳಜಿ ಇರುವ, ಧೈರ್ಯಶಾಲಿ ಮಹಿಳೆ’ ಇದು ಅಮೆರಿಕದ ಹ್ಯೂಸ್ಟನ್‌ನಲ್ಲಿ ಇರುವ ಭಾರತೀಯ ಮೂಲದ ವ್ಯಕ್ತಿಗಳ ಅಭಿಪ್ರಾಯ ಇದು. ಭಾರತದ ರಾಯಭಾರ, ದೂತಾವಾಸ ಕಚೇರಿಗಳನ್ನು ವಿಶ್ವದ ಎಲ್ಲೆಡೆ ತೆರೆಯಲು ಶ್ರಮಿಸಿದ್ದಾರೆ. ರಾಜತಾಂತ್ರಿಕತೆಗೆ ಮಾನವೀಯತೆಯ ಸ್ಪರ್ಶ ನೀಡಿದ ಹೆಗ್ಗಳಿಕೆ ಅವರದ್ದು. ಅವರ ನಾಯಕತ್ವ ಗುಣ ಯಾವತ್ತೂ ನೆನಪಿನಲ್ಲಿ ಇರಿಸಿ ಕೊಳ್ಳುವಂಥದ್ದು ಎಂದು ಗ್ರೇಟರ್‌ ಹ್ಯೂಸ್ಟನ್‌ನ ಇಂಡೋ ಅಮೆರಿಕನ್‌ ವಾಣಿಜ್ಯ ಮಂಡಳಿ ಸಂಸ್ಥಾಪಕ ಕಾರ್ಯದರ್ಶಿ ಜಗದೀಪ್‌ ಅಹ್ಲುವಾಲಿಯಾ ಹೇಳಿದ್ದಾರೆ. 2017ರಲ್ಲಿ ಹ್ಯೂಸ್ಟನ್‌ ವಿವಿಯಲ್ಲಿನ 200 ಮಂದಿ ಭಾರತದ ವಿದ್ಯಾರ್ಥಿ ಗಳು ಪ್ರವಾಹದಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ ವೇಳೆ ಅವರನ್ನು ಕಾಪಾಡಲು ಹ್ಯೂಸ್ಟನ್‌ನಲ್ಲಿರುವ ಭಾರತದ ದೂತಾವಾಸದ ಕಚೇರಿ ಮೂಲಕ ನಡೆಸಿದ ಶ್ರಮ ಮೆಚ್ಚತಕ್ಕದ್ದಾಗಿತ್ತು ಎಂದಿದ್ದಾರೆ. ಓಕ್ಲಹಾಮಾ ಸ್ಟೇಟ್‌ ವಿವಿಯ ಪ್ರಾಧ್ಯಾಪಕ ಸುಭಾಷ್‌ ಕಾಕ್‌ ಪ್ರಕಾರ ಸುಷ್ಮಾ ಸ್ವರಾಜ್‌ ಧೈರ್ಯಶಾಲಿ ಮಹಿಳೆ ಯಾಗಿದ್ದರು. ವಿದೇಶಾಂಗ ಸಚಿವೆ‌ಯಾಗಿ ಐದು ವರ್ಷ ಅವರ ಕಾರ್ಯನಿರ್ವಹಣೆ ಮೆಚ್ಚತಕ್ಕದ್ದು ಎಂದಿದ್ದಾರೆ.

Advertisement

ಅಂಬಾಲ ಕಂಟೋನ್ಮೆಂಟಲ್ಲಿ ದುಃಖ: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಸಣ್ಣ ವಯಸ್ಸಿನಲ್ಲಿ ಬೆಳೆದು ಬಂದ ಅಂಬಾಲ ಕಂಟೋನ್ಮೆಂಟ್‌ ಮತ್ತು ಇತರ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗ ಬೇಸರದ ಛಾಯೆ ಆವರಿಸಿದೆ. ಚಿಕ್ಕಂದಿ ನಲ್ಲಿಯೇ ಅವರು ಅಲ್ಲಿ ಆಡಿ, ಬೆಳೆದಿದ್ದರು. ಚಿಕ್ಕಂದಿನಲ್ಲಿ ಯೇ ಅವರು ಶಾಲೆಯಲ್ಲಿ ನಡೆಯುತ್ತಿದ್ದ ಚರ್ಚೆ, ಭಾಷಣಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು ಎಂದು ನಿವಾಸಿ ಯೊಬ್ಬರು ನೆನಪಿಸಿಕೊಂಡರು. “6ನೇ ತರಗತಿ ಯಿಂದ ಅವರು ರಾಜಕೀಯದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದರು. ನಂತರ ಆ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ತೋರಿಸಲಾರಂಭಿಸಿದರು’ ಎಂದು ಕಂಟೋನ್ಮೆಂಟ್‌ನ ಹಿರಿಯ ನಿವಾಸಿ ಶ್ಯಾಮ್‌ ಬಿಹಾರಿ ನೆನಪಿಸಿಕೊಂಡರು. ಸಣ್ಣ ವಯಸ್ಸಿನಿಂದಲೇ ಅವರು ತೊಂದರೆಯಲ್ಲಿ ಇರುವವರಿಗೆ ನೆರವಾಗುವ ಪದ್ಧತಿ ಅವರಲ್ಲಿ ಇತ್ತು ಎಂದು ಶ್ಯಾಮ್‌ ಬಿಹಾರಿ ನೆನಪಿಸಿಕೊಂಡರು.

ಬಾಲ್‌ನಿಂದ ಚೆಲ್ಲಿದ ಹಾಲು: ಅರುವತ್ತರ ವಯಸ್ಸಿನಲ್ಲಿರುವ ಮತ್ತೂಬ್ಬರು ಸುಷ್ಮಾ ಅವರ ಕುಟುಂಬಕ್ಕಾಗಿ ಪ್ರತಿ ದಿನ ಬೆಳಗ್ಗೆ ಹಾಲು ತೆಗೆದುಕೊಂಡು ಹೋಗಲು ಬರುತ್ತಿದ್ದರು. ಅದೇ ಸಂದರ್ಭದಲ್ಲಿ ಅವರು ಮತ್ತು ಸ್ನೇಹಿತರು ಕ್ರಿಕೆಟ್‌ ಆಡುತ್ತಿದ್ದರು. ಬ್ಯಾಟ್‌ನಿಂದ ಸಿಡಿದ ಚೆಂಡು ಪಾತ್ರೆಗೆ ತಾಗಿ ನೆಲಕ್ಕೆ ಬಿದ್ದ ಕಾರಣ ಹಾಲು ಚೆಲ್ಲಿತು. ಅದರಿಂದ ಅವರು ಕೋಪಗೊಳ್ಳದೆ, “ಆಟ ಮುಂದುವರಿಸಿ’ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next