Advertisement

ಕಳಸ : 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಹಾರಿ ಬಿದ್ದ ಕಾರು

05:36 PM Jul 30, 2023 | Team Udayavani |

ಚಿಕ್ಕಮಗಳೂರು: ಮನೆಯೊಂದರ ಎದುರು ನಿಯಂತ್ರಣ ತಪ್ಪಿದ ಇನ್ನೊವಾ ಕಾರೊಂದು 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಹಾರಿ ಬಿದ್ದ ಅವಘಡ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿ ಹೋಗಿದೆ.

Advertisement

ಕೋಲಾರದಿಂದ ಹೊರನಾಡಿನತ್ತ ಹೋಗುತ್ತಿದ್ದ ಪ್ರವಾಸಿಗರ ಕಾರು ಅವಘಡಕ್ಕೆ ಗುರಿಯಾಗಿದ್ದು, ಕಾರಿನಲ್ಲಿದ್ದ 9 ಜನರಿಗೆ ಗಂಭೀರವಾದ ಗಾಯಗಳಾಗಿದ್ದು, ತತ್ ಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next