ಕೋಟ: ಕಾರೊಂದು ಹೊಳೆ ಪಕ್ಕದ ಕಣಿವೆಗೆ ಉರುಳಿದ ಘಟನೆ ಬನ್ನಾಡಿ ಸಮೀಪ ಉಪ್ಲಾಡಿ ಸೇತುವೆ ಸಮೀಪ ಶನಿವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಅಬ್ದುಲ್ ರಜಾಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕೋಟದಿಂದ ಮಧುವನ ಕಡೆ ಸಂಚರಿಸುತ್ತಿದ್ದ ಕಾರಿಗೆ ನಾಯಿಯೊಂದು ಅಡ್ಡಬಂದಿದ್ದು ಅದನ್ನು ತಪ್ಪಿಸುವ ಬರದಲ್ಲಿ ಕಾರು ರಸ್ತೆಯಂಚಿನ ತಡೆಗೋಡೆ ಕಲ್ಲಿಗೆ ಢಿಕ್ಕಿ ಹೊಡೆದು ಸುಮಾರು ಹತ್ತು ಅಡಿ ಆಳದ ಕಣಿವೆಗೆ ಉರುಳಿದೆ.
ತಪ್ಪಿದ ಭಾರೀ ಅನಾಹುತ:
ರಸ್ತೆಯಂಚಿನ ತಡೆಗೋಡೆ ಕಲ್ಲಿಗೆ ಕಾರು ಢಿಕ್ಕಿ ಹೊಡೆದಿದ್ದರಿಂದ ಹಾಗೂ
ಮರವೊಂದಕ್ಕೆ ಸಿಕ್ಕಿಕೊಂಡಿದ್ದರಿಂದ ವೇಗ ಕಡಿತವಾಗಿದೆ. ಇಲ್ಲವಾದರೆ ಕಾರು ಕಣಿವೆ ಪಕ್ಕದಲ್ಲೇ ಇದ್ದ ಬನ್ನಾಡಿ ದೊಡ್ಡ ಹೊಳೆಯ ಪಾಲಾಗಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಅನಂತರ ಕ್ರೆ„ನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಯಿತು.