Advertisement

ಯುವ ಮತದಾರರ ಸೆಳೆಯಲು ಅಭಿಯಾನ

03:28 PM Mar 14, 2023 | Team Udayavani |

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, 400 ರೌಡಿಶೀಟರ್‌ಗಳನ್ನು ಗುರುತಿಸಲಾಗಿದೆ. ಇವರಲ್ಲಿ ಓರ್ವ ರೌಡಿಶೀಟರ್‌ನ್ನು ಈಗಾಗಲೇ ಗಡಿಪಾರು ಮಾಡಲಾಗಿದ್ದು, ಇನ್ನೂ 3 ಮಂದಿಯನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

Advertisement

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವರ ಚಲನ-ವಲನಗಳನ್ನು ಪರಿಶೀಲಿಸಿ ಪೊಲೀಸ್‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿ ಸ ಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯುವ ಸಮೂಹ ಸೆಳೆಯಲು ವಿಶೇಷ ಅಭಿಯಾನ: ಹಿರಿಯ ನಾಗರಿಕರು, ವಯಸ್ಕರು ಮತದಾನಕ್ಕೆ ತೋರುವ ಅಸಕ್ತಿಯನ್ನು ವಿದ್ಯಾವಂತ ಯುವ ಸಮೂಹ ತೋರುತ್ತಿಲ್ಲ. ಹೀಗಾಗಿ ವಿದ್ಯಾವಂತರ ಮತದಾನ ಹೆಚ್ಚಳಕ್ಕಾಗಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಮತ್ತು ಕಡಿಮೆ ಮತದಾನವಾಗಿದೆ. ಇದರ ಜೊತೆಗೆ ವಿದ್ಯಾವಂತ ಯುವ ಸಮೂಹ ಮತದಾನದಿಂದ ದೂರ ಉಳಿಯುತ್ತಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಎರಡು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಿಮ್ಮ ಮತಗಟ್ಟೆಯ ಬಗ್ಗೆ ತಿಳಿದುಕೊಳ್ಳಿ, “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಗೊಂದಲಗಳನ್ನು ಪರಿಶೀಲಿಸಿಕೊಳ್ಳಬಹುದು: ಜಿಲ್ಲೆಯಲ್ಲಿ 1.20 ಲಕ್ಷ ಜನರ ಹೆಸರು ಡಿಲಿಟ್‌ ಆಗಿದ್ದು, ಎರಡು ಕಡೆ ದಾಖಲಾಗಿರುವ 80,000 ಮಂದಿಯ ಹೆಸರುಗಳು ಡಿಲಿಟ್‌ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೆಲವರ ಹೆಸರು ಡಿಲಿಟ್‌ ಆಗಿದೆ. ಇದನ್ನು ಮತಗಟ್ಟೆಯ ಅಧಿಕಾರಿಗಳ ಬಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಪ್ರತಿಯೊಬ್ಬರು “ವೋಟರ್‌ ಹೆಲ್ಪ್ಲೈನ್‌ ಆ್ಯಪ್‌’ ಅನ್ನು ಡೌನ್ಲೋಡ್‌ ಮಾಡಿಕೊಳ್ಳಬೇಕು. ಇದರ ಮೂಲಕ ಪ್ರತಿಯೊಂದು ಮತಗಟ್ಟೆಯಲ್ಲಿಯೂ ಮತಗಟ್ಟೆ ಅಧಿ ಕಾರಿ ಹೆಸರು ಹಾಗೂ ಮೊಬೈಲ್‌ ನಂಬರ್‌ ಎಲ್ಲವನ್ನು ನೀಡಲಿದೆ. ಆ ಮೂಲಕ ನಿಮ್ಮ ಗೊಂದಲಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಹಿರಿಯರಿಗೆ, ವಿಶೇಷಚೇತರಿಗೆ ಅಂಚೆ ಮತದಾನ: 80 ವರ್ಷ ತುಂಬಿದವರು, ಹಾಸಿಗೆ ಹಿಡಿದಿರುವವರು, ವಿಶೇಷ ಚೇತನರ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 80 ಸಾವಿ ರಕ್ಕೂ ಹೆಚ್ಚು ಮಂದಿ 80 ವರ್ಷ ಪೂರೈಸಿದವರು ಹಾಗೂ 30 ಸಾವಿರ ವಿಶೇಷ ಚೇತನರಿದ್ದಾರೆ. ಇವರೆಲ್ಲರಿಗೂ ಅಂಚೆ ಮತದಾನಕ್ಕೆ ಅವ ಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

Advertisement

ವಿವಿ ಪ್ಯಾಟ್‌ ಬಗ್ಗೆ ಅನುಮಾನಬೇಡ: ವಿವಿ ಪ್ಯಾಟ್‌ ಮತ್ತು ಇವಿಎಂ ಬಗ್ಗೆ ಜನರಿಗೆ ಉಂಟು ಮಾಡಿರುವ ಅನುಮಾನವನ್ನು ನಿವಾರಣೆ ಮತ್ತು ಜಾಗೃತಿಗಾಗಿ ಈಗಾಗಲೇ 250 ಸೆಕ್ಟರ್‌ ಅಧಿಕಾರಿಗಳ ಮೂಲಕ ಬ್ಯಾಲೆಟ್‌ ಯೂನಿಟ್‌ ಹೇಗೆ ಕೆಲಸ ನಿರ್ವಹಿಸುತ್ತಿವೆ ಎಂದು ಪ್ರಾತ್ಯಕ್ಷಿಕತೆ ಮಾಡಲಾಗುತ್ತಿದೆ. ವಿವಿಪ್ಯಾಟ್‌ ನಿಜಕ್ಕೂ ಪಾರದರ್ಶಕವಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಈ ಸಂದರ್ಭ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್‌, ಪದಾಧಿಕಾರಿಗಳಾದ ಸುಬ್ಬಣ್ಣ, ರಂಗಸ್ವಾಮಿ ಇದ್ದರು. ದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್‌ ಇದ್ದರು.

ಖಾತೆ-ಕಂದಾಯಗಳನ್ನು ಮಾಡಿಕೊಡಲು ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು. ಈಗಾಗಲೇ ಇಂತಹ ವಿಚಾರಗಳು ಗಮನಕ್ಕೆ ಬಂದಿವೆ. ಪುರಸಭೆ, ನಗರಸಭೆ ಆಯುಕ್ತರು, ತಹಸೀಲ್ದಾರ್‌ ಅವರಿಗೆ ಖಡನ್‌ ಸೂಚನೆ ನೀಡಲಾಗಿದೆ. ಒಂದು ವೇಳೆ ಖಾತೆ-ಕಂದಾಯಗಳನ್ನು ಮಾಡಿಕೊಡಲು ಸತಾಯಿಸುವ ಅಧಿಕಾರಿ ವಿರುದ್ಧ ದೂರು ಬಂದರೆ ಅಂತಹವರನ್ನು ಅಮಾನತು ಮಾಡಲಾಗುವುದು. – ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next