Advertisement
ಕಲ್ಲಿನ ಕೋರೆಯ ಗುಂಡಿ ರುದ್ರಭೂಮಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲೇ ಇದ್ದು, ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಂಪು ಕಲ್ಲಿನ ಕೋರೆಯ ಮಧ್ಯೆ ಇದೆ. ಇದರಿಂದ ರಸ್ತೆ ಅಕ್ಕಪಕ್ಕದಲ್ಲಿ
ಗುಂಡಿಯಿದೆ. ರಸ್ತೆಗೆ ತಡೆಗೋಡೆಯೂ ಇಲ್ಲದಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ.
ಹಿಂದು ರುದ್ರಭೂಮಿಯನ್ನು ಬೆಳ್ಮಣ್ ರೋಟರಿ ಕ್ಲಬ್ ನವೀಕರಿಸಲಾದ್ದು, ಇದ ವೇಳೆ ಪಂಚಾಯತ್ ಆಡಳಿತ ಮನಸ್ಸು ಮಾಡಿದ್ದರೆ, ಗುಂಡಿಗಳನ್ನೂ ಮುಚ್ಚಬಹುದಿತ್ತು. ಆದರೆ ಆಡಳಿತ ಗಮನ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೂಡಲೇ ಪಂಚಾಯತ್ ಈ ಬಗ್ಗೆ ಕ್ರಮ ಕೈಗೊಳ್ಳಲು ಜನರು ಆಗ್ರಹಿಸಿದ್ದಾರೆ. ತುರ್ತಾಗಿ ಗುಂಡಿಯನ್ನು ಮುಚ್ಚಿಸಿ
ಬೆಳ್ಮಣ್ ಶ್ಮಶಾನ ರಸ್ತೆಯ ಇಕ್ಕೆಲಗಳಲ್ಲಿ ಆತಂಕ ಹುಟ್ಟಿಸುವ ಗುಂಡಿಯನ್ನು ಮುಚ್ಚುವ ಕೆಲಸ ಪಂಚಾಯತ್ ವತಿಯಿಂದ ಕೂಡಲೇ ನಡೆಯಬೇಕಾಗಿದೆ.
-ರಘುನಾಥ ನಾಯಕ್ ಪುನಾರು,
ಸ್ಥಳೀಯರು
Related Articles
ಈ ಬಗ್ಗೆ ಪಂಚಾಯತ್‌ನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ವಾರಿಜಾ,
ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ
Advertisement