ವಾಡಿ: ಮದುವೆಗೆ ಬಂದು ಅಕ್ಷತೆ ಹಾಕುವ ಮೂಲಕ ಆಶೀರ್ವದಿಸಿ ಶುಭಕೋರಿದ ನೆಂಟರಿಗೆ, ಸ್ನೇಹಿತರಿಗೆ ಮದುಮಗನೋರ್ವ ಸಾಹಿತ್ಯ ಕೃತಿ ಜತೆಗೆ ಸಸಿಗಳನ್ನು ಕೊಟ್ಟು ಪರಿಸರ ಕಾಳಜಿ ಮೆರದ ಪ್ರಸಂಗ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ರವಿವಾರ ಪಟ್ಟಣದ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೋಲಿ ಸಮಾಜದ ಯುವ ಮುಖಂಡ, ಪರಿಸರ ಮತ್ತು ಸಾಹಿತ್ಯ ಪ್ರೇಮಿ ಮಡಿವಾಳ ಬಿದನೂರ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಮದುವೆ ಸಮಾರಂಭಕ್ಕೆಂದು ಸುಮಾರು ಎರಡು ನೂರಕ್ಕೂ ಹೆಚ್ಚು ಸಸಿಗಳನ್ನು ಮೊದಲೇ ತರಿಸಿಟ್ಟುಕೊಂಡಿದ್ದರು. ವೇದಿಕೆಯಲ್ಲಿ ಶುಭ ಕೋರಲು ಬಳಿ ಬಂದ ಪ್ರತಿಯೊಬ್ಬರ ಕೈಗೆ ಒಂದೊಂದು ಪುಸ್ತಕ ಹಾಗೂ ಸಸಿ ಕೊಟ್ಟು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ತೀವ್ರ ತರಹದ ಮಾನಸಿಕ ಅನಾರೋಗ್ಯಗಳು ಮತ್ತು ಮನಃಶಾಸ್ತ್ರೀಯ ಪುನರ್ವಸತಿ ಯೋಜನೆ
Related Articles
ಮುಂಗಾರು ಮಳೆಯ ಆರಂಭದಲ್ಲಿ ವಿತರಿಸಲಾದ ನೂರಾರು ಸಸಿಗಳಲ್ಲಿ ಕೆಲವೊಂದಿಷ್ಟಾದರೂ ಭೂಮಿಗೆ ಬೇರು ಬಿಟ್ಟು ಮರವಾಗಿ ನಿಂತರೆ ಪರಿಸರ ಉಳಿಸಿದಂತಾಗುತ್ತದೆ. ಪ್ರಗತಿಪರ ಬರಹಗಾರರ ಸಾಹಿತ್ಯ ಕೃತಿಗಳನ್ನು ಜನರಿಗೆ ವಿತರಿಸಿದರೆ ಅವು ಜ್ಞಾನ ಕೊಟ್ಟು ಮನೆ ಬೆಳಗುತ್ತವೆ. ಪುಸ್ತಕ ವ್ಯಾಪಾರಿಗೂ ಮತ್ತು ಸಾಹಿತ್ಯ ರಚನೆಕಾರರಿಗೂ ಸಹಕಾರ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಈ ತಯಾರಿ ಮಾಡಲಾಯಿತು ಎಂದು ಮದುಮಗ ಮಡಿವಾಳ ಬಿದನೂರ ಹೇಳಿದ್ದಾರೆ.