Advertisement
1. ಉಬ್ಬುಹಲ್ಲುಮೇಲ್ಭಾಗದ ದಂತಪಂಕ್ತಿಯ ಹಲ್ಲುಗಳು ತುಂಬಾ ಮುಂದಕ್ಕೆ ಚಾಚಿಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ವ್ಯಕ್ತಿಗೆ ತುಟಿಗಳನ್ನು ಮುಚ್ಚಲು ಅಸಾಧ್ಯವಾಗುತ್ತದೆಯಲ್ಲದೆ ಮುಖದ ಅಂದವೂ ಕೆಡುತ್ತದೆ.
ಮೇಲ್ಭಾಗದ ಮುಂದಿನ ಹಲ್ಲುಗಳು ಕೆಳಗಿನ ಸಾಲಿನ ಹಲ್ಲುಗಳಿಗಿಂತ ಮುಂದಕ್ಕೆ ಕಚ್ಚಿಕೊಳ್ಳುವುದು. 3. ಅಡ್ಡಾದಿಡ್ಡಿ ಜಗಿತ
ಮೇಲ್ಭಾಗದ ಹಲ್ಲುಗಳು ಕೆಳ ಸಾಲಿನ ಹಲ್ಲುಗಳ ಒಳಗೆ ಕಚ್ಚಿಕೊಳ್ಳುವ ಪರಿಣಾಮ ಜಗಿತದ ಹೊಂದಾಣಿಕೆ ಕೆಡುತ್ತದೆ.
Related Articles
ಮೇಲ್ಭಾಗದ ಹಲ್ಲು ಸಾಲು ಮತ್ತು ಕೆಳಭಾಗದ ಹಲ್ಲು ಸಾಲು ಜಗಿಯುವಾಗ ಕೂಡಿಕೊಳ್ಳುವುದಿಲ್ಲ.
Advertisement
5. ಹಲ್ಲುಗಳು ಕಿಕ್ಕಿರಿದಿರುವಿಕೆ ಮತ್ತು ಹಲ್ಲುಗಳ ನಡುವೆ ಹೆಚ್ಚು ಸ್ಥಳಹಲ್ಲುಗಳಿಗೆ ಮೂಡಲು ಅಗತ್ಯವಿದ್ದಷ್ಟು ಸ್ಥಳಾವಕಾಶ ಇಲ್ಲವಾದಾಗ ಕಿಕ್ಕಿರಿಯುವಿಕೆ ಉಂಟಾಗುತ್ತದೆ. ಹಲ್ಲುಗಳು ತಪ್ಪಿ ಹೋಗುವುದರಿಂದ ಹೆಚ್ಚುವರಿ ಸ್ಥಳಾವಕಾಶ ಉಂಟಾಗಬಹುದು. ಕೆಲವೊಮ್ಮೆ ಹಲ್ಲುಸಾಲುಗಳು ಸರಿಯಾಗಿ ಹೊಂದದೆ ಕುರೂಪಕ್ಕೂ ಕಾರಣವಾಗಬಹುದು. ಕ್ಲಿಪ್‌ಗ್ಳು ಅಥವಾ ಬ್ರ್ಯಾಕೆಟ್‌ಗಳ ಸಹಾಯದಿಂದ ಹಲ್ಲುಗಳನ್ನು ತೆಗೆದುಹಾಕಿ ಯಾ ತೆಗೆದುಹಾಕದೆಯೂ ಹಲ್ಲುಗಳ ಹೊಂದಾಣಿಕೆಯನ್ನು ಸರಿಪಡಿಸಬಹುದು. ಯಾವುದೇ ಸಮಸ್ಯೆ ಇಲ್ಲದೆಯೇ ಮುಖದಲ್ಲಿ ಸುಂದರ ನಗುವನ್ನು ಅರಳಿಸಬಹುದು.ಸುದಂತ ಯೋಜನೆ ಚಿಕಿತ್ಸೆಯ ಮೂಲಕ ನಿಮ್ಮ ಹಲ್ಲುಗಳ ಹೊಂದಾಣಿಕೆಯನ್ನು ಸರಿಪಡಿಸಿಕೊಳ್ಳಿ; ಸುಂದರ ನಗು ನಿಮ್ಮ ಮುಖದಲ್ಲಿ ಮೂಡಲಿ. ಡಾ| ಸಿದ್ದಾರ್ಥ ಮೆಹ್ತಾ,
ಆಥೊìಡಾಂಟಿಕ್ಸ್ ಮತ್ತು ಡೆಂಟೊಫೇಶಿಯಲ್ ಆಥೊìಪೆಡಿಕ್ಸ್ ವಿಭಾಗ,
ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ