Advertisement

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

12:55 AM Apr 25, 2024 | Team Udayavani |

ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ದಿ| ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ಎರಡೂವರೆ ನಿಮಿಷಗಳಲ್ಲಿ ಹಾಡುವುದನ್ನು ಕಡ್ಡಾಯ ಗೊಳಿಸಿ ರಾಜ್ಯ ಸರಕಾರ ಹೊರಡಿ ಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

Advertisement

ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ 2022ರ ಸೆ. 25ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರ ನ್ಯಾಯ ಪೀಠವು ಕರ್ನಾಟಕ ಶಿಕ್ಷಣ ಕಾಯಿದೆ-1983ರಡಿ ನಾಡಗೀತೆಯನ್ನು ಇಂತಹದ್ದೇ ಧಾಟಿಯಲ್ಲಿ ಹಾಡುವಂತೆ ಆದೇಶ ನೀಡಲು ಸರಕಾರಕ್ಕೆ ಅಧಿಕಾರವಿದೆ ಎಂದು ಹೇಳಿ ಕಿಕ್ಕೇರಿ ಅರ್ಜಿಯನ್ನು ವಜಾ ಮಾಡಿದೆ.

“ಇಂತಹದೇ ಧಾಟಿಯಲ್ಲಿ ನಾಡಗೀತೆ ಹಾಡಬೇಕೆಂದು ಸರಕಾರ ಸುಖಾಸುಮ್ಮನೆ ಆದೇಶ ಹೊರಡಿಸಿಲ್ಲ. ನಾಡಗೀತೆ ವಿಚಾರವಾಗಿ ಹಲವು ನಿಯೋಗಗಳೊಂದಿಗೆ ಚರ್ಚಿಸಲಾಗಿದೆ. ಧಾಟಿಯನ್ನು ಅಂತಿಮಗೊಳಿಸಲು ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿ ನೀಡಿದ ವರದಿ ಆಧರಿಸಿ ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ನಾಡಗೀತೆಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ’ ಎಂದು ನ್ಯಾಯಾಲಯ ಆದೇಶ ನೀಡಿದೆ.

“ಸರಕಾರದ ಆದೇಶದಿಂದ ಅರ್ಜಿ ದಾರರ ಹಕ್ಕಿಗೆ ಯಾವುದೇ ಧಕ್ಕೆ ಯಾಗಿಲ್ಲ. ಅವರ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂಬ ಪ್ರಶ್ನೆ ಪ್ರಕರಣ ದಲ್ಲಿ ಉದ್ಭವಿಸುವುದಿಲ್ಲ. ಇಂತಹ ಆದೇಶ ಹೊರಡಿಸಲು ಸರ ಕಾರಕ್ಕೆ ಯಾವುದೇ ಶಾಸನ ರೂಪಿ ಸುವ ಆವಶ್ಯಕತೆ ಇಲ್ಲ. ರಾಷ್ಟ್ರಗೀತೆ ಯನ್ನು ಹೀಗೆಯೇ ಇಂತಿಷ್ಟೇ ಅವಧಿ ಯಲ್ಲಿ ಹಾಗೂ ಇಂತಹುದೇ ಧಾಟಿಯಲ್ಲಿ ಹಾಡ ಬೇಕು ಎಂಬಂತಹ ನಿಯಮಾ ವಳಿ ಗಳು ನಾಡ  ಗೀತೆಯ ವಿಷಯ ದಲ್ಲೂ ಅನ್ವಯ ವಾಗುತ್ತವೆ’ ಎಂದು ನ್ಯಾಯಪೀಠ ಹೇಳಿದೆ.

ಹಿನ್ನೆಲೆಯೇನು?
-2022, ಸೆ. 25ರಂದುದಿ| ಅನಂತಸ್ವಾಮಿ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡಲು ರಾಜ್ಯ ಸರಕಾರ ಆದೇಶ
-ಪೂರ್ಣ ಗೀತೆಗೆ ಅನಂತಸ್ವಾಮಿ ರಾಗ ಸಂಯೋಜಿಸಿಲ್ಲ. ಸಿ. ಅಶ್ವತ್ಥ್ ಧಾಟಿಯಲ್ಲಿ ಹಾಡಬೇಕು: ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ
-ಸರಕಾರದ ಆದೇಶ ಸರಿಯಿದೆ: ತೀರ್ಪು

Advertisement

ತೀರ್ಪು ನನಗೆ ತೀವ್ರ ನಿರಾಶೆ ತಂದಿದೆ. ಆದೇಶದ ಪ್ರತಿ ಲಭಿಸಿದ ತತ್‌ಕ್ಷಣವೇ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಮೈಸೂರು ಅನಂತಸ್ವಾಮಿ ಅವರು ಸಂಪೂರ್ಣವಾಗಿ ರಾಗ ಸಂಯೋಜನೆ ಮಾಡಿರುವ ನಾಡಗೀತೆಯ ಪ್ರತಿ ನೀಡುವಂತೆ ಕೇಳಿದ್ದೆ. ನಾನು ಕೇಳಿರುವ ಪ್ರಶ್ನೆಯೇ ಬೇರೆ, ನನಗೆ ಸಿಕ್ಕಿದ ಉತ್ತರವೇ ಬೇರೆ. ನನ್ನ ವಾದ ಪ್ರಸ್ತುತಿಯನ್ನು ನ್ಯಾಯಾಲಯ ಶ್ಲಾ ಸಿರುವುದಕ್ಕೆ ನಾನು ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
-ಕಿಕ್ಕೇರಿ ಕೃಷ್ಣಮೂರ್ತಿ, ಅರ್ಜಿದಾರ

Advertisement

Udayavani is now on Telegram. Click here to join our channel and stay updated with the latest news.

Next