Advertisement
ಸಾಮಾನ್ಯ ಶ್ರೇಣಿಯಲ್ಲಿ 65 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಮೆರಿಕ ವಿವಿಗಳಿಗೆ ವ್ಯಾಸಂಗಕ್ಕೆ ಆಗಮಿಸುವವರಿಗೆ 20 ಸಾವಿರ ಎಚ್1-ಬಿ ವೀಸಾ ಮೀಸಲಿರಿಸಲಾಗಿದೆ. ಆದರೆ, ಸಂಶೋಧನೆ ಕೈಗೊಳ್ಳಲು ಬರುವ ವಿದೇಶಿಗರಿಗೆ ಈ ಬಾರಿ ಎಚ್1- ಬಿ ವೀಸಾ ಅರ್ಜಿ ನೀಡಲಾಗುವುದಿಲ್ಲ. 6 ತಿಂಗಳು ಅರ್ಜಿ ಸ್ವೀಕಾರ ನಡೆಯಲಿದೆ.
ಇರಾಕ್ ಅನ್ನು ಕೈಬಿಟ್ಟು 6 ಮುಸ್ಲಿಂ ರಾಷ್ಟ್ರಗಳ ಮೇಲೆ ಪರಿಷ್ಕೃತ ತಾತ್ಕಾಲಿಕ ವಲಸೆ ನಿರ್ಬಂಧ ನೀತಿಗೆ ಸಹಿ ಹಾಕಿದ್ದ ಡೊನಾಲ್ಡ್ ಟ್ರಂಪ್‌ಗೆ ಮತ್ತೆ ಹಿನ್ನಡೆಯಾಗಿದೆ. ಕಳೆದ ವಾರವಷ್ಟೇ ಈ ಕಾಯ್ದೆ ಜಾರಿಯಾಗಿತ್ತಾದರೂ ಈಗ ಇದಕ್ಕೆ ಹವಾಯಿಯ ಫೆಡರಲ್ ಜಡ್ಜ್ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಖಂಡಿಸಿರುವ ಫೆಡರಲ್ ಜಡ್ಜ್ ಡೆರ್ರಿಕ್ ವ್ಯಾಟ್ಸನ್, ನಿರ್ಬಂಧ ಹೇರಲಾಗಿರುವ ಎಲ್ಲ ದೇಶಗಳಲ್ಲೂ ಶೇ.90ಕ್ಕಿಂತ ಅಧಿಕ ಮುಸ್ಲಿಮರೇ ಇದ್ದಾರೆ. ಇದರಿಂದ ಅಮೆರಿಕ ಇಸ್ಲಾಂ ವಿರೋಧಿ ಎಂದು ಕರೆಯಿಸಿಕೊಳ್ಳುತ್ತದೆ’ ಎಂದಿದ್ದಾರೆ.