ಉಡುಪಿ: ವಿನಯ್ಸ್ ಅಕಾಡೆಮಿ ಆಯೋಜಿಸಿ ಪ್ರಸ್ತುತಪಡಿಸುತ್ತಿರುವ ಸಿತಾರ್-ಬಾನ್ಸುರಿ ಜುಗಲ್ ಬಂದಿ ಸಂಗೀತ ಕಾರ್ಯಕ್ರಮ “ಬಸಂತ್ ಉತ್ಸವ್’ ಎ. 2ರ ಸಂಜೆ 5.30ರಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಇದನ್ನೂ ಓದಿ:ಉಡುಪಿ; ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲ: ಧಾರ್ಮಿಕ ಸಭೆ
ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಪಂ| ಪ್ರವೀಣ್ ಗೋಡ್ಖಿಂಡಿ, ಉಸ್ತಾದ್ ರಫೀಕ್ ಖಾನ್ ಅವರು ಸಿತಾರ್-ಬಾನ್ಸುರಿ ವಾದನದಲ್ಲಿ ಜತೆಯಾಗಲಿದ್ದಾರೆ. ಅವರೊಂದಿಗೆ ತಬಲಾ ಪಟು ಮಾಯಾಂಕ್ ಬೇಡೆಕರ್ ತಬಲಾ ಸಾಥ್ ನೀಡಲಿದ್ದಾರೆ.
ಸಂಗೀತಾಸಕ್ತರಿಗೆ ಉಚಿತ ಪಾಸ್ ಲಭ್ಯವಿದ್ದು, ಉಡುಪಿಯ ವಿದ್ಯಾಸಮುದ್ರ ಮಾರ್ಗದಲ್ಲಿರುವ ವಿನಯ್ಸ್ ಅಕಾಡೆಮಿ ಅಥವಾ ಪ್ರಶಾಂತ್ ಗೋಖಲೆ ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.