Advertisement

ವಿವಾದ ಸೃಷ್ಟಿಸಿದ ಸುನಕ್‌ ಉದ್ಯಾನದ ಕಂಚಿನ ಪ್ರತಿಮೆ

06:41 PM Nov 27, 2022 | Team Udayavani |

ಲಂಡನ್‌: ಯುಕೆ ಪ್ರಧಾನಿ ರಿಷಿ ಸುನಕ್‌ ಅವರ ಉದ್ಯಾನದಲ್ಲಿ ಅಳವಡಿಸಲಾದ ಕಂಚಿನ ಪ್ರತಿಮೆಯೊಂದು ವಿವಾದಕ್ಕೆ ಕಾರಣವಾಗಿದೆ.

Advertisement

ಯು.ಕೆ. ಸರ್ಕಾರವು ಇತ್ತೀಚೆಗೆ ಖ್ಯಾತ ಕಲಾವಿದ ಹೆನ್ರಿ ಮೂರ್‌ ಅವರ “ವರ್ಕಿಂಗ್‌ ಮಾಡೆಲ್‌ ಫಾರ್‌ ಸೀಟೆಡ್‌ ವಿಮೆನ್‌’ ಎಂಬ ಕಂಚಿನ ಮೂರ್ತಿಯನ್ನು ಬರೋಬ್ಬರಿ 12.80 ಕೋಟಿ ರೂ.ಗಳಿಗೆ ಖರೀದಿಸಿ, ಅದನ್ನು ಪ್ರಧಾನಿ ರಿಷಿ ಸುನಕ್‌ ಅವರ 10 ಡೌನಿಂಗ್‌ ಸ್ಟ್ರೀಟ್‌ನ ಉದ್ಯಾನದಲ್ಲಿ ಅಳವಡಿಸಿತ್ತು.

ದೇಶವು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಈ ಹೊತ್ತಲ್ಲಿ ತೆರಿಗೆದಾರರ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದಕ್ಕೆ ಬ್ರಿಟನ್‌ನಾದ್ಯಂತ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಇಂಥ ಸ್ಥಿತಿಯಲ್ಲಿ ಅಷ್ಟೊಂದು ಹಣ ವೆಚ್ಚ ಮಾಡಿ ಪ್ರತಿಮೆ ಅಳವಡಿಸುವುದು ಅಗತ್ಯವಿತ್ತೇ ಎಂದು ಜನರು ಪ್ರಶ್ನಿಸತೊಡಗಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಡೌನಿಂಗ್‌ ಸ್ಟ್ರೀಟ್‌, “ಈ ನಿರ್ಧಾರದಲ್ಲಿ ಯಾವ ರಾಜಕಾರಣಿಯ ಪಾತ್ರವೂ ಇಲ್ಲ’ ಎಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next