Advertisement

ದೇಶದ ಶೇ.99 ಮಂದಿ ಬಳಿ ಇದೆ ಆಧಾರ್‌

03:45 AM Jan 29, 2017 | Team Udayavani |

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡುವ ಆಧಾರ ಕಾರ್ಡ್‌ ದೇಶದ ಶೇ.99 ಮಂದಿ ಬಳಿ ಇದೆ. ಈ ಬಗ್ಗೆ ಯುಐಡಿಎಐ ಮೂಲಗಳೇ ತಿಳಿಸಿವೆ. ಸಾಂಖೀಕವಾಗಿ ಹೇಳುವುದಿದ್ದರೆ 121 ಕೋಟಿ ಜನಸಂಖ್ಯೆಯ ಪೈಕಿ 18 ವರ್ಷಕ್ಕಿಂತ ಮೇಲ್ಪಟ್ಟ 111 ಕೋಟಿ ದೇಶವಾಸಿಗಳಲ್ಲಿ ಈಗ ಆಧಾರ ಕಾರ್ಡ್‌ ಇದೆ. ಕಳೆದ ವರ್ಷದ ನ.8ರಂದು ನೋಟುಗಳ ಅಪನಗದೀಕರಣ ಘೋಷಣೆ ಮಾಡಿದ ಬಳಿಕ ಕೇಂದ್ರ ನಗದು ರಹಿತ ವಹಿವಾಟಿಗೆ ಹೆಚ್ಚಿನ ಒತ್ತು ನೀಡಲಾರಂಭಿಸಿತು. ಇದಾದ ಬಳಿಕ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಆಧಾರ ನೋಂದಣಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 

Advertisement

ಸಾರ್ವಜನಿಕ ವಿತರಣಾ ವ್ಯವಸ್ಥೆ, ಗೃಹೋಪಯೋಗಿ ಎಲ್‌ಪಿಜಿ ಸಹಾಯ ಧನ ವಿತರಿಸಲು ಯುಐಡಿಎಐ ಗುರುತಿನ ಚೀಟಿ ಬಳಕೆ ಮಾಡಿದ್ದರಿಂದ ಕೇಂದ್ರದ ಬೊಕ್ಕಸಕ್ಕೆ 36 ಸಾವಿರ ಕೋಟಿ ರೂ.ಉಳಿತಾಯವಾಗಿದೆ.  ಭಿಮ್‌ ಆ್ಯಪ್‌ ಮೂಲಕ ಆಧಾರ್‌ ಕಾರ್ಡ್‌ ನೆರವಿನೊಂದಿಗೆ ವಹಿವಾಟು ಮಾಡುವ ವ್ಯವಸ್ಥೆ ಈಗಾಗಲೇ ಹಲವು ಬ್ಯಾಂಕುಗಳಲ್ಲಿ ಜಾರಿಯಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next