Advertisement

“ಭಾರತದಲ್ಲಿರುವ ಶೇ.99ರಷ್ಟು ಮುಸ್ಲಿಮರು ಹಿಂದೂಸ್ಥಾನಿಗಳು’

10:32 PM Nov 13, 2022 | Team Udayavani |

ಥಾಣೆ: ಭಾರತದಲ್ಲಿರುವ ಶೇ.99ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯ ಮತ್ತು ಮಾತೃಭೂಮಿಯ ಕಾರಣದಿಂದಾಗಿ ಹಿಂದೂಸ್ಥಾನಿಗಳೇ ಆಗಿದ್ದಾರೆ ಎಂದು ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್‌ ಕುಮಾರ್‌ ಹೇಳಿದರು.

Advertisement

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉತ್ತಾನ್‌ನಲ್ಲಿ ನಡೆದ ಮುಸ್ಲಿಂ ರಾಷ್ಟ್ರೀಯ ಮಂಚ್‌(ಎಂಆರ್‌ಎಂ) ಕಾರ್ಯಕರ್ತರ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಭಾರತೀಯರಿಗೆ ಸಾಮಾನ್ಯ ಪೂರ್ವಜರಿದ್ದರು. ನಮ್ಮ ಮಾತೃಭೂಮಿ ಒಂದೇ ಆಗಿದೆ.

ಹೀಗಾಗಿ ಹಿಂದೂಗಳು ಮತ್ತು ಮುಸ್ಲಿಮರ ಡಿಎನ್‌ಎ ಒಂದೇ ಆಗಿದೆ’ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹೇಳಿಕೆಯನ್ನು ಬೆಂಬಲಿಸಿದರು.

“ರಾಷ್ಟ್ರದ ಬಗೆಗಿನ ನಮ್ಮ ಕರ್ತವ್ಯವನ್ನು ನಾವು ಎಲ್ಲದಕ್ಕಿಂತ ಪ್ರಮುಖ ಎಂದು ಪರಿಗಣಿಸಬೇಕು. ನಂತರ ಇತರೆ ವಿಷಯಗಳು ಮುಖ್ಯವಾಗಬೇಕು. ಪವಿತ್ರ ಕುರಾನ್‌ನ ತತ್ವ ಮತ್ತು ನಿರ್ದೇಶನಗಳನ್ನು ನೀವು ಪರಿಪಾಲಿಸಬೇಕು,’ ಎಂದು ಎಂಆರ್‌ಎಂ ಕಾರ್ಯಕರ್ತರನ್ನು ಉದ್ದೇಶಿಸಿ ಇಂದ್ರೇಶ್‌ ಕುಮಾರ್‌ ಹೇಳಿದರು. ಕಾರ್ಯಾಗಾರದಲ್ಲಿ ಮಹಿಳೆಯರು ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳ 40ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next