Advertisement

Mobile: ದೇಶದಲ್ಲೇ ಈಗ ಶೇ.99.2 ಮೊಬೈಲ್‌ ಉತ್ಪಾದನೆ!: ಅಶ್ವಿ‌ನಿ ವೈಷ್ಣವ್‌

11:59 PM Nov 25, 2023 | Team Udayavani |

ಹೊಸದಿಲ್ಲಿ: ದೇಶವನ್ನು ಉತ್ಪಾದನ ಕ್ಷೇತ್ರದ ಪ್ರಧಾನ ಕೇಂದ್ರವನ್ನಾಗಿ ಮಾಡಬೇಕು ಎಂಬ ಪ್ರಧಾನಿ ಮೋದಿಯವರ ಕನಸು ನನಸಾಗುವತ್ತ ಸಾಗಿದೆ. ದೇಶದಲ್ಲಿಯೇ ಈಗ ಪ್ರಮುಖ ಕಂಪೆನಿಗಳ ಮೊಬೈಲ್‌ ಅನ್ನು ಉತ್ಪಾದಿಸಲಾಗುತ್ತಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ.

Advertisement

ದೇಶದ ಮೊಬೈಲ್‌ ಕ್ಷೇತ್ರ 9 ವರ್ಷಗಳ ಅವಧಿಯಲ್ಲಿ 20 ಬಾರಿ ಬೆಳವಣಿಗೆ ಸಾಧಿಸಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 2014ರಲ್ಲಿ ಶೇ.78 ಮೊಬೈಲ್‌ಗ‌ಳನ್ನು ಆಮದು ಮಾಡಿಕೊಳ್ಳುವ ಮೂಲಕ ಇತರ ದೇಶಗಳನ್ನು ಅವಲಂಬಿ ಸಬೇಕಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಶೇ.99.2ರಷ್ಟು ಫೋನ್‌ಗಳನ್ನು ದೇಶದಲ್ಲಿಯೇ ಉತ್ಪಾದಿಸಲಾಗಿದೆ. ಈ ಮೂಲಕ ಪ್ರಮುಖ ಕಂಪೆನಿಗಳ ಉತ್ಪನ್ನಗಳು ಮೇಡ್‌ ಇನ್‌ ಇಂಡಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ದೂರಸಂಪರ್ಕ ಕ್ಷೇತ್ರದ ಪ್ರಮುಖರ ಜತೆಗೆ ಸಭೆಯನ್ನೂ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next