Advertisement

98ರ ವ್ಯಕ್ತಿಗೆ ಎಂಎ ಪದವಿ ಪ್ರದಾನ

06:25 AM Dec 28, 2017 | Team Udayavani |

ಪಾಟ್ನಾ: ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ 98 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನಳಂದಾ ಮುಕ್ತ ವಿವಿಯಿಂದ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ವೃದ್ಧನ ಹೆಸರು ರಾಜ್‌ ಕುಮಾರ್‌ ವೈಶ್‌. ಇವರು ಅರ್ಥಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು. ನಳಂದಾ ಮುಕ್ತ ವಿವಿಯ 12ನೇ ಘಟಿಕೋತ್ಸವದಲ್ಲಿ ಅವರು ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್‌ ಅವರಿಂದ ಪದವಿ ಸ್ವೀಕರಿಸಿದರು.

Advertisement

ರಾಜ್‌ ಕುಮಾರ್‌ 2015ರಲ್ಲಿ ಎಂಎ (ಅರ್ಥಶಾಸ್ತ್ರ)ಕ್ಕೆ ನೋಂದಾಯಿಸಿ ಕೊಂಡಿದ್ದರು. “ನನ್ನ ಕನಸು ಇಂದು ನಿಜವಾಗಿದೆ. ನಾನು ಈ ಪದವಿ ಪಡೆಯಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಯುವ ಜನಾಂಗ ಶಿಕ್ಷಣದ ಕುರಿತು ಹೆಚ್ಚಿನ ಗಮನ ಕೊಡಬೇಕು’ ಎಂದು ಪದವಿ ಸ್ವೀಕರಿಸಿದ ಬಳಿಕ ಅವರು ಹೇಳಿದರು. ವಿವಿಯ ರಿಜಿಸ್ಟ್ರಾರ್‌ ಮಾತನಾಡಿ, “ನಳಂದಾ ಮುಕ್ತ ವಿವಿ ಮಟ್ಟಿಗೆ ಇದೊಂದು ಸಾಧನೆಯೇ ಸರಿ. ರಾಜ್‌ ಕುಮಾರ್‌ ಅವರಿಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next