Advertisement

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

02:15 AM May 04, 2024 | Team Udayavani |

ಹೊಸದಿಲ್ಲಿ: 2000 ರೂ. ಮುಖ ಬೆಲೆಯ ಶೇ.97.76ರಷ್ಟು ನೋಟುಗಳು 2024ರ ಎ.1ರ ಒಳಗೆ ಆರ್‌ಬಿಐಗೆ ವಾಪಸಾಗಿವೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ತಿಳಿಸಿದೆ.

Advertisement

ಆರ್‌ಬಿಐ ಪತ್ರಿಕಾ ಪ್ರಕಟನೆಯ ಪ್ರಕಾರ, 2023ರ ಮೇ 19ರಂದು ನೋಟಿನ ಚಲಾವಣೆ ಹಿಂಪಡೆಯುವ ನಿರ್ಧಾರ ಪ್ರಕಟಿಸಿದಾಗ 2,000 ರೂ. ಮುಖಬೆಲೆಯ 3.56 ಲ. ಕೋ. ರೂ. ಮೌಲ್ಯದ ನೋಟುಗಳು ಚಲಾವಣೆ ಯಲ್ಲಿದ್ದವು. ಆದರೀಗ 2024ರ ಎ.30ರ ವೇಳೆಗೆ ಚಲಾವಣೆಯಲ್ಲಿರುವ ನೋಟು ಗಳ ಮೌಲ್ಯ 7,961 ಕೋ. ರೂ. ಗೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಈ ಮೂಲಕ ಶೇ.97.76ರಷ್ಟು ನೋಟುಗಳು ವಾಪಸಾದಂತಾಗಿವೆ ಎಂದಿದೆ.

2023ರ ಮೇ 19ರಂದು ನೋಟನ್ನು ಹಿಂಪಡೆಯುವುದಾಗಿ ಘೋಷಿಸಿದ ಬಳಿಕ ಆರ್‌ಬಿಐನ 19 ಶಾಖೆಗಳಲ್ಲಿ ನೋಟುಗಳನ್ನು ಹಿಂದಿರುಗಿಸಲು 2023ರ ಅಕ್ಟೋಬರ್‌ 9ರ ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾ ಗಿತ್ತು. ಅನಂತರ ಜನರ ಅಗತ್ಯಗಳನ್ನು ಪರಿಗಣಿಸಿ ಇಂಡಿಯಾ ಪೋಸ್ಟ್‌ ಮೂಲಕ ಆರ್‌ಬಿಐ ಯಾವುದೇ ಶಾಖೆಗೆ 2,000 ರೂ.ಗಳ ನೋಟನ್ನು ಕಳುಹಿಸಿ, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ಕೊಳ್ಳಲು ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next