Advertisement

96 ಜನ ನೇತ್ರದಾನ ವಾಗ್ಧಾನ-129 ಜನರಿಂದ ರಕ್ತದಾನ

06:15 PM Jan 13, 2022 | Team Udayavani |

ನರಗುಂದ: ಪಟ್ಟಣದ ಕರ್ನಾಟಕ ಕೇಸರಿ ದಿ.ಜಗನ್ನಾಥರಾವ್‌ ಜೋಶಿ ಸ್ಮಾರಕದ ಜಗನ್ನಾಥ ಭವನದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ 96 ಜನರು ನೇತ್ರದಾನ ಮಾಡಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

Advertisement

ಪಟ್ಟಣದ ಕೇಶವ ರಕ್ತ ಸಹಾಯತ ಕೇಂದ್ರ ಹಾಗೂ ಜಗನ್ನಾಥರಾವ ಜೋಶಿ ಸ್ಮಾರಕ ಪ್ರತಿಷ್ಠಾನ ಆಶ್ರಯದಲ್ಲಿ ರಕ್ತದಾನ ಹಾಗೂ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 129 ಜನರು ರಕ್ತದಾನ ಮಾಡುವ ಜೊತೆಗೆ 134 ಜನರು ರಕ್ತ ತಪಾಸಣೆ ಮಾಡಿಸಿಕೊಂಡಿದ್ದಲದೇ 96 ಜನರು ನೇತ್ರದಾನ ವಾಗ್ಧಾನ ಮಾಡಿ ಮಾನವೀಯತೆ ಮೆರೆದರು.

ಶಿಬಿರವನ್ನು ಸ್ಥಳೀಯ ಪಂಚಗ್ರಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಈಶ್ವರೀಯ ವಿವಿ ಸಂಚಾಲಕಿ ಬ್ರಹ್ಮಕುಮಾರಿ ಪ್ರಭಕ್ಕನವರು ಇದ್ದರು. ಡಾ| ಭಾರತಿ, ಡಾ| ಬಸವರಾಜ, ಸಿಬ್ಬಂದಿ ಶ್ರೀಧರ ಹಳಾಳ, ಚೇತನ, ವಿಠuಲ ಬೇವಿನಾಳ, ಫಕೀರೇಶ, ಕುಮಾರ ಮತ್ತು ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ವಿಠಲ ಕಾಪ್ಸೆ, ಸೋಮು ಹೊಂಗಲ, ಸಂಜೀವ ನಲವಡೆ, ವಿಶ್ವನಾಥ ದೇಶಪಾಂಡೆ, ಕೃಷ್ಣ ಮಹಾಲಿನಮನಿ, ಸಂಗಣ್ಣ ಕಳಸಾ, ಮಂಜು ಬೆಳಗಾವಿ, ಶಂಕರಗೌಡ ಪಾಟೀಲ, ಮೀನಾಜಿ ಜೋರಾಪೂರ, ಶೇಖರ ಪೂಜಾರ, ಉಮೇಶಗೌಡ ಖಂಡ ಪ್ಪಗೌಡ್ರ, ಸುಷ್ಮಾ ಹಡಗಲಿ, ಬಸವರಾಜ ಬೋವಿ, ಪ್ರವೀಣ ಯಳ್ಳೂರ ಮುಂತಾದವರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next